ಕೃಷಿ ಪರಂಪರೆಗೆ ಕಂಬಳ ಭದ್ರ ಬುನಾದಿ

ಮೂಲ್ಕಿ : ಕೃಷಿ ಪರಂಪರೆಗೆ ಭದ್ರ ಬುನಾದಿಯಾಗಿರುವ ಕಂಬಳ ಕರಾವಳಿಗರ ಬದುಕಿನ ಸಾಂಘಿಕ ಶಕ್ತಿಯ ಸಂಕೇತ. ಮೂಲ್ಕಿ ಸೀಮೆ ಅರಸು ಕಂಬಳ ಸಾಂಪ್ರದಾಯಿಕ ಮಾಗಣೆಯ ಕಂಬಳವಾಗಿದೆ. ನಂಬಿಕೆಯ ನಡುವೆ ಸಮಾನತೆಯ ವಿಶ್ವಾಸವನ್ನು ಪ್ರತಿಪಾದಿಸುವಲ್ಲಿ ಕ್ರೀಡೆಯ ಬೆಸುಗೆಯನ್ನು ಹಿರಿಯರು ನೀಡಿದ್ದಾರೆ ಅದನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದೇವೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಹೇಳಿದರು.
ಪಡುಪಣಂಬೂರು ಮೂಲ್ಕಿ ಅರಮನೆಯ ಬಾಕಿಮಾರು ಗದ್ದೆಯಲ್ಲಿ ನಡೆದ ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಸೀಮೆಯ ಅರಸರ ನೆಲೆಯಲ್ಲಿ ಅವರು ಅರಮನೆಯ ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ರಾಜ ಮರ್ಯಾದೆಯ ಗೌರವವನ್ನು ಪಡೆದು ಕಂಬಳಕ್ಕೆ ಧರ್ಮಚಾವಡಿಯಲ್ಲಿ ಚಾಲನೆ ನೀಡಲು ಸಮಿತಿಗೆ ಆದೇಶಿಸಿದರು.
ಸಂಸ್ಕೃತಿ-ಸಂಸ್ಕಾರದ ಕ್ರೀಡೆ : ಆಂಡ್ರೋ ಡಿಸೋಜ
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಧರ್ಮಗುರು ರೆ.ಫಾ.ಆಂಡ್ರೋ ಲಿಯೋ ಡಿಸೋಜಾ ಕಂಬಳಕ್ಕೆ ಚಾಲನೆ ನೀಡಿ, ಜನಪದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಂಬಳದ ಕ್ರೀಡೆಯಲ್ಲಿ ಕಾಣಬಹುದು, ಯುವ ಜನತೆಯನ್ನು ಸಂಸ್ಕೃತಿ ಕಟ್ಟುವಲ್ಲಿ ನಮ್ಮ ತುಳುನಾಡ ಪರಂಪರೆ ಉತ್ತಮ ವೇದಿಕೆಯಾಗಿದೆ ಎಂದರು.
ಮುಂಬಯಿ ಬಂಟರ ಮಾಜಿ ಅಧ್ಯಕ್ಷ ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಅರಮನೆಯ ಎಂ. ಗೌತಮ್ ಜೈನ್, ಆಶಾಲತಾ, ಪಡುಬಿದ್ರಿ ಬೀಡು ರತ್ನಾಕರ ರಾಜ ಕಿನ್ಯಕ್ಕ ಬಲ್ಲಾಳ್, ಕುಳೂರು ಬೀಡು ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಹಳೆಯಂಗಡಿ ಪಿ.ಸಿ.ಎ.ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು, ಉದ್ಯಮಿ ಪ್ರಕಾಶ್ ಎನ್. ಶೆಟ್ಟಿ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಶೇಖರ್ ಶೆಟ್ಟಿ, ಗಣೇಶ್ ಶೆಟ್ಟಿ ಕಾಪು, ಸಮಿತಿಯ ಗೌರವಾಧ್ಯಕ್ಷರಾದ ಪಂಜಗುತ್ತ ಶಾಂತಾರಾಮ ಶೆಟ್ಟಿ ಹಳೆಯಂಗಡಿ, ಎಂ.ಎಚ್.ಅರವಿಂದ ಪೂಂಜಾ, ಕಾರ್ಯಾಧ್ಯಕ್ಷರುಗಳಾದ ಚಂದ್ರಶೇಖರ್ ಜಿ. ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಶಶೀಂದ್ರ ಎಂ. ಸಾಲ್ಯಾನ್, ಸುಂದರ್ ದೇವಾಡಿಗ, ದಿನೇಶ್ ಶೆಟ್ಟಿ, ದಿನೇಶ್ ಸುವರ್ಣ, ಶುಭ್ರತ್ ದೇವಾಡಿಗ, ಉಮೇಶ್ ಪೂಜಾರಿ, ಹರ್ಷಿತ್ ಡಿ. ಸಾಲ್ಯಾನ್, ಸಹ ಕಾರ್ಯದರ್ಶಿಗಳಾದ ನವೀನ್‌ಕುಮಾರ್ ಬಾಂದಕೆರೆ, ಕಿರಣ್ ಹೊಗೆಗುಡ್ಡೆ, ರಂಜಿತ್ ಪುತ್ರನ್, ಕೋಶಾಧಿಕಾರಿ ಕೆ.ವಿಜಯಕುಮಾರ್ ಶೆಟ್ಟಿ, ಸಹ ಕೋಶಾಧಿಕಾರಿ ಮನ್ಸೂರ್ ಹೆಚ್., ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಸ್ವಾಗತಿಸಿ, ಪ್ರಸ್ತಾವನೆಗೈದರು, ಪ್ರಧಾನ ಕಾರ್ಯದರ್ಶಿ ಎಡ್ಮೆಮಾರ್ ನವೀನ್‌ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.
ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಕರಾವಳಿ ಜಿಲ್ಲೆಯ ವಿವಿಧೆಡೆಯ 100ಕ್ಕೂ ಹೆಚ್ಚು ಕೋಣಗಳು ಭಾಗವಹಿಸಿದ್ದವು.

Kinnigoli-23121709 Kinnigoli-231217010 Kinnigoli-231217011 Kinnigoli-231217012 Kinnigoli-231217013 Kinnigoli-231217014 Kinnigoli-231217015 Kinnigoli-231217016 Kinnigoli-231217017 Kinnigoli-231217018 Kinnigoli-231217019 Kinnigoli-231217020

Comments

comments

Comments are closed.

Read previous post:
Kinnigoli-23121708
ಹಳೆಯಂಗಡಿ : ಕ್ರಿಸ್ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ: ಕದಡಿರುವ ಕೋಮು ಸಾಮರಸ್ಯ ಬೆಸೆಯುವ ಕೆಲಸವಾಗಬೇಕು. ಕ್ರಿಸ್‌ಮಸ್ ಹಬ್ಬದ ಸ್ನೇಹ ಸೌಹಾರ್ಧತೆಯ ಸಂದೇಶವನ್ನು ಎಲ್ಲರಿಗೂ ತಿಳಿಹೇಳಬೇಕು. ಸಾಮರಸ್ಯದ ಜೀವನ ನಮ್ಮದಾಗಲಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು...

Close