ಐಕಳ ಕಂಬಳ ರಸ್ತೆಯ ಅಭಿವೃದ್ಧಿಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಮೂಲ್ಕಿ ಹಾಗೂ ಮೂಡುಬಿದ್ರೆ ಕ್ಷೇತ್ರದಲ್ಲಿ ತನ್ನ ಪ್ರಯತ್ನದಿಂದ ಸುಮಾರು 16 ಕೋಟಿ ರೂ.ಗಳಷ್ಟು ಮೊತ್ತದ ಯೋಜನೆಗಳನ್ನು ತರಲಾಗಿದೆ. ಕಲ್ಲಮುಂಡ್ಕೂರು ಗ್ರಾಮಪಂಚಾಯಿತಿಯ ನಿಡ್ಡೋಡಿಗೆ ಗ್ರಾಮವಿಕಾಸ ಯೋಜನೆಯಡಿ ಒಂದು ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಐಕಳ ಗ್ರಾಮದ ಐಕಳಬಾವ ನಾಗಬನದಿಂದ ಧರ್ಮಚಾವಡಿಯವರೆಗೆ ಹೋಗುವ ರಸ್ತೆಗೆ ರೂ. 10ಲಕ್ಷ ವೆಚ್ಚದಲ್ಲಿ ಕಾಂಕ್ರೀಟು ಹಾಕುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ 20 ಅಟೋರಿಕ್ಷಾ ನಿಲ್ದಾಣವನ್ನು ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಐಕಳ ಪರಿಸರದಲ್ಲಿ ಹೈಮಾಸ್ಟ್ ದಾರಿ ದೀಪಕ್ಕೆ ಅನುದಾನ ನೀಡಲಾಗುವುದು, ಜನವರಿ ತಿಂಗಳಿನಲ್ಲಿ ನಡೆಯುವ ಕಂಬಳದ ಸಮಸಯದಲ್ಲಿ ರಸ್ತೆಯನ್ನು ಉದ್ಘಾಟಿಸಲಾಗುವುದು. ಸಿದ್ದರಾಮಯ್ಯ ಸರಕಾರ ಹಲವು ಯೋಜನೆಗಳಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಇನ್ನಷ್ಟು ಯೋಜನೆಯಗಳನ್ನು ತರಲಾಗುವುದು ಇಲ್ಲಿನ ಗ್ರಾಮೀಣ ರಸ್ತೆ, ದಾರಿದೀಪ, ಅಣೆಕಟ್ಟು ಮುಂತಾದ ಅಭಿವೃದ್ಧಿ ಕಾಮಗಾರಿ ನಡೆಸ ಬಹುದು ಎಂದು ಹೇಳಿದರು.
ಬೆಳಪು ದೇವೀಪ್ರಸಾದ ಶೆಟ್ಟಿ ಮಾತನಾಡಿ ಇಲ್ಲಿನ ರಸ್ತೆಗೆ ಹಿರಿಯ ಸ್ವಾತಂತ್ಯ ಹೋರಾಟಗಾರ ಡಾ. ಸಂಜೀವನಾಥ ಐಕಳ ಎಂಬ ಹೆಸರು ಇಡಲಾಗುವುದು ಎಂದು ಹೇಳಿದರು.
ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ ಹೆಗ್ಡೆ, ಸಾಹುಲ್ ಹಮೀದ್, ಮಯ್ಯದಿ, ಮಹಮ್ಮದ್ ಗುಲಾಂ, ಐಕಳ ಜಯಪಾಲ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯೆ ಸುಗುಣ, ಸಂಜೀವ ಶೆಟ್ಟಿ, ವಸಂತಿ, ಸುಂದರಿ, ಐಕಳ ಮುರಳೀಧರ ಶೆಟ್ಟಿ, ಗಣೇಶ್ ಭಟ್, ವರುಣ್ ಭಟ್, ಲೀಲಾಧರ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-27121709

Comments

comments

Comments are closed.

Read previous post:
Kinnigoli-27121708
ಯಕ್ಷಗಾನ ಸಂಸ್ಕೃತಿ ಸಂಸ್ಕಾರದ ಕಲೆ

ಕಿನ್ನಿಗೋಳಿ: ಅಕ್ಷರ ಜ್ಞಾನ ಇಲ್ಲದ ಗ್ರಾಮೀಣ ಜನತೆಗೆ ಪೌರಾಣಿಕ ಕಥೆಗಳನ್ನು ಮನಮುಟ್ಟುವಂತೆ ಯಕ್ಷಗಾನ ಕಲಾವಿದರು ಪ್ರದರ್ಶಿಸುತ್ತಿರುವುದರಿಂದ ಅರ್ಥೈಸಿಕೊಳ್ಳುವಲ್ಲಿ ಸಹಕಾರಿಯಾಗಿದೆ ಇಂತಹ ಕಲಾವಿದರನ್ನು ಗೌರವಿಸಿದಲ್ಲಿ ಇನ್ನಷ್ಟು ಕಲಾವಿದರಿಗೆ ಪ್ರೇರಣೆ ಎಂದು...

Close