ಕಟೀಲು- ಕ್ರಿಸ್ಮಸ್ ಸೌಹಾರ್ದ ಸಂಗಮ- 2017

ಕಿನ್ನಿಗೋಳಿ: ಯೇಸು ಕ್ರಿಸ್ತರ ಜನನವನ್ನು ಜಗತ್ತಿನಾದ್ಯಂತ ಕ್ರೈಸ್ತರು ಆಚರಿಸುತ್ತಿರುದುಮಾತ್ರವಲ್ಲದೆ, ಇತರ ಧರ್ಮೀಯರೂ ಗೌರವಯುತವಾಗಿ ಆಚರಿಸುವಂತಾಗಿದೆ ಎಂದು ಕಟೀಲು ಚರ್ಚ್ ಧರ್ಮ ಗುರು ಫಾ. ರೋನಾಲ್ದ್ ಕುಟಿನ್ಹೊ ಹೇಳಿದರು.
ಕಟೀಲು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಶ್ರೀ ಕಟೀಲು ವಿವಿದ್ದೋದ್ದೇಶ ಸಹಕಾರ ಸಂಘದಲ್ಲಿ ಸೋಮವಾರ ನಡೆದ ಕ್ರಿಸ್ಮಸ್ ಸೌಹಾರ್ದ ಸಂಗಮ -2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಗತ್ತಿಗೆ ಶಾಂತಿ ಸಹಬಾಳ್ವೆಯ ಸಂದೇಶ ನೀಡಿದ ಮಹಾನ್ ಸಾಧಕ ಅವರ ಮಾರ್ಗದರ್ಶನ ತತ್ವ ಆದರ್ಶಗಳು ನಮಗೆ ದಾರಿದೀಪವಾಗಿದೆ, ಕಟೀಲು ಸಹಕಾರಿ ಸಂಸ್ಥೆಯ ಮೂಲಕ ಹುಟ್ಟುಹಬ್ಬವನ್ನು ಆಚರಿಸಿವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಡಾ. ಭಗಿನಿ ಜೀವಿತಾ ಅವರನ್ನು ಸನ್ಮಾನಿಸಲಾಯಿತು.
ಸಹಕಾರ ಸಂಘದ ಅಧಕ್ಷ ಕಟೀಲು ಸಂಜೀವ ಮಡಿವಾಳ ಅದ್ಯಕ್ಷತೆವಹಿಸಿದ್ದರು.
ಕನ್ನಡ ಪರಿಷತ್ ಮಾಜಿರಾಜಾಧ್ಯಕ್ಷ ಧರ್ಮದರ್ಶಿ ಹರಿಕೃಷ್ನ ಪುನರೂರು ಸಂಘದ ಉಪಾಧ್ಯಕ್ಷ ಸ್ಟ್ಯಾನಿ ಪಿಂಟೋ , ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ವಸಂತಿ, ಬಲ್ಲಣ ಪ್ರೀತಿ ಸದನ ಆಶ್ರಮದ ಭಗಿನಿ ಮಾರ್ಗರೇಟ್, ಸಂಘದ ಮುಖ್ಯ ಕಾರ್ಯನಿರ್ವಹಾಧಿಕಾರಿ ಉಷಾ, ಪ್ರಬಂಧಕಿ ಸುಮನ ಮತ್ತಿತರರು ಉಪಸ್ಥಿತರಿದ್ದರು.

Kinnigoli-27121704

Comments

comments

Comments are closed.

Read previous post:
Kinnigoli-27121703
ಪುನರೂರು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣ ನೀಡಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿಸಬೇಕು ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು. ಪುನರೂರು ಭಾರತ ಮಾತಾ ಪ್ರೌಢ ಶಾಲೆ...

Close