ಮರ್ಕಝ್ ರುಬಿ ಪ್ರಚಾರ ಸಮಾವೇಶ

ಕಿನ್ನಿಗೋಳಿ: ದೇಶದಲ್ಲಿರುವ ಹಲವಾರು ಪ್ರಸಿದ್ದ ಸ್ಮಾರಕಗಳು ಇಸ್ಲಾಂ ಧರ್ಮದ ಕೊಡುಗೆಗಳಾಗಿದೆ. ನಮ್ಮ ಸಮಾಜದ ಯುವ ಜನತೆಯನ್ನು ಧಾರ್ಮಿಕತೆಯತ್ತ ತರಬೇಕು ಎಂದು ಕರ್ನಾಟಕ ಎಸ್‌ಎಸ್‌ಎಫ್‌ನ ಜೊತೆ ಕಾರ್ಯದರ್ಶಿ ಹಾಫಿಝ್ ಸುಫಿಯಾನ್ ಸಖಾಫಿ ಮೂಡಬಿದಿರೆ ಹೇಳಿದರು.
ಗುತ್ತಕಾಡು ಶಾಲಾ ಮೈದಾನದ ತಾಜುಲ್ ಉಲಾಮಾ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟೊಡೆಂಡ್ಸ್ ಫೆಡೆರೇಶನ್ ಎಸ್. ಎಸ್. ಎಫ್ ಶಾಂತಿನಗರ ಗುತ್ತಕಾಡು ಶಾಖೆ ಕಿನ್ನಿಗೋಳಿ ಇದರ ಆಶ್ರಯದಲ್ಲಿ ಶನಿವಾರ ನಡೆದ ಹಬ್ಬುರ್ರಸೂಲ್ ಕಾನ್ಪರೆನ್ಸ್ ಹಾಗೂ ಮರ್ಕಝ್ ರುಬಿ ಪ್ರಚಾರ ಸಮಾವೇಶದಲ್ಲಿ ದಿಕ್ಸೂಜಿ ಭಾಷಣಕಾರರಾಗಿ ಮಾತನಾಡಿದರು. ಶಾಂತಿನಗರ ಖತೀಬರಾದ ಕೆ. ಎ. ಇಬ್ರಾಹಿಂ ರಝ್ಚಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಆಶ್ರಫ್ ರಝಾ ಅಂಜದಿ ಮಾತನಾಡಿ ಯುವಜನತೆ ನಮ್ಮ ಧರ್ಮದ ಸಾರವನ್ನು ಅರಿತು ಜೀವನ ಮಾಡಿದಾಗ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಲು ಸಾಧ್ಯ ಎಂದು ಹೇಳಿದರು.
ಕಿಲ್ಲೂರು ಅಲ್ ಹೈದೋಸಿ ತಂಗಳ್ ಅಸ್ಸಯ್ಯದ್ ಶಿಹಾಬುದ್ದೀನ್ ಸಖಾಫಿ ದುವಾ ಪ್ರಾರ್ಥನೆಗೈದರು.
ಎಸ್‌ಎಸ್‌ಎಫ್ ಗುತ್ತಕಾಡು ಶಾಖೆಯ ಮಹಮ್ಮದ್ ಸೌಫಲ್ ಅಧ್ಯಕ್ಷತೆ ವಹಿಸಿದ್ದರು. ಕಲ್ಕರೆ ಮಿಸ್ಬಾಹುಲ್ ಮದೀನ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಎ. ಪಿ. ಅಬ್ದುಲ್ ಮದನಿ, ಸುರತ್ಕಲ್ ಯಾಕೂಬ್ ಇಡ್ಯಾ, ಕಿನ್ನಿಗೋಳಿ ಮಸೀದಿಯ ಮಾಜಿ ಅದ್ಯಕ್ಷ ಟಿ. ಎಚ್ ಮಯ್ಯದ್ದಿ , ಪುನರೂರು ಮಸೀದಿಯ ಸಿದ್ದಿಕ್ ಪುನರೂರು, ಪಕ್ಷಿಕೆರೆಯ ಮಸೀದಿಯ ಕೆ. ಯು . ಮೊಹಮ್ಮದ್ ನೂರಾನಿಯಾ, ಕಿನ್ನಿಗೋಳಿ ಮಸೀದಿಯ ಅಬ್ದುಲ್ ಲತೀಫ್ ಸಖಾಫಿ, ಅಬ್ಬು ಸತ್ತಾರ್ ಸಖಾಫಿ, ಅಬ್ದುಲ್‌ಖಾದರ್ ಮದನಿ, ಅಬ್ದುಲ್ ಹಮೀದ್, ನೂರುದ್ದೀನ್ ಮತ್ತಿತರರಿದ್ದರು. ಸ್ವಾಗತ್ ಸಮಿತಿಯ ಟಿ. ಕೆ. ಅಬ್ದುಲ್ ಕಾದರ್ ಸ್ವಾಗತಿಸಿದರು. ಇರ್ಷಾದ್ ಹೆಜಮಾಡಿ ಕೋಡಿ ಹಾಗೂ ಟಿ. ಎಮ್ ಎ ನಝರ್ ಗುತ್ತಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-27121702

Comments

comments

Comments are closed.

Read previous post:
Kinnigoli-27121701
ದಾಮಸ್ಕಟ್ಟೆ ವಾರ್ಷಿಕ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ದಾಮಸ್ಕಟ್ಟೆ ರಾಮಕೃಷ್ಣ ಭಜನಾ ಮಂಡಳಿಯ 60 ನೇ ವರ್ಷದ ವಾರ್ಷಿಕ ಭಜನಾ ಮಂಗಲೋತ್ಸವ ಶನಿವಾರ ನಡೆಯಿತು. ಅರ್ಚಕ ಶ್ರೀಧರ ಭಟ್ ಏಳಿಂಜೆ , ಶ್ರೀ ರಾಮಕೃಷ್ಣ ಭಜನಾ...

Close