ಯಕ್ಷಗಾನ ಕಲೆ ಶ್ರೇಷ್ಟ ಕಲೆ

ಕಿನ್ನಿಗೋಳಿ: ಯಕ್ಷಗಾನ ವಿಶಿಷ್ಟ ಶ್ರೇಷ್ಟ ಕಲೆಯಾಗಿದ್ದು ಸಮಷ್ಟಿಯ ಕಲೆಯಾಗಿದೆ, ಕಲಾವಿದರನ್ನು ಹಾಗೂ ಕಲೆಯನ್ನು ಬೆಳೆಸಿ ಪೋಷಿಸುತ್ತಿರುವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಕಟೀಲು ಶ್ರೀ ಕಟೀಲು ದೇವಳದ ಅರ್ಚಕ ವೆಂಕರಮಣ ಆಸ್ರಣ್ಣ ಹೇಳಿದರು.
ನಿಡ್ಡೋಡಿ ಬಂಗೇರ ಪದವುನಲ್ಲಿ ಸಸಿಹಿತ್ಲು ಶ್ರೀ ಭಗವತೀ ಮೇಳದ ಯಕ್ಷಗಾನ ಬಯಲಾಟ ಭಾನುವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದರು.
ಈ ಸಂದರ್ಭ ಸಸಿಹಿತ್ಲು ಭಗವತೀ ದೇವಳದ ಕಾರ್ಯದರ್ಶಿ ಟಿ. ಕೃಷ್ಣ ಉಡುಪಿ, ಮೇಳದ ಸಂಚಾಲಕ ದಯಾನಂದ ಗುಜರನ್, ಹಿಮ್ಮೇಳ ಕಲಾವಿದ ದೇವಿಪ್ರಸಾದ್ ಕಟೀಲು, ದೇವಳದ ಕಾರ್ಯಕರ್ತ ಶೇಖರ ಕೋಟ್ಯಾನ್ ಹಳೆಯಂಗಡಿ ಅವರನ್ನು ಗೌರವಿಸಲಾಯಿತು.
ಭಗವತೀ ದೇವಳದ ಅನುವಂಸಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅಧ್ಯಕ್ಷತೆವಹಿಸಿದ್ದರು.
ಪತ್ರಕರ್ತ ಪರಮಾನಂದ ಸಾಲ್ಯಾನ್, ಸಂಘಟಕ ದೊಡ್ಡಯ್ಯ ಬಂಗೇರ, ನೀರಾಜಾಕ್ಷಿ , ದೇವಿಕಾ, ರಾಧಿಕಾ, ದೀಪಕ್, ಪೃಥ್ವಿರಾಜ್, ಗ್ರೀಷ್ಮ್ ತೋಕೂರು, ಶರತ್ ಕುಮಾರ್, ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂಜೀವ ಪೂಜಾರಿ ಸಮ್ಮಾನಿತರ ಬಗ್ಗೆ ಮಾತನಾಡಿದರು. ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-27121706

Comments

comments

Comments are closed.

Read previous post:
Kinnigoli-27121705
ಚೌತಿ ಹಬ್ಬ ಮತ್ತು ಸಾರ್ವಜನಿಕ ಕೆಂಡ ಸೇವೆ

ಕಿನ್ನಿಗೋಳಿ: ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ವಾರ್ಷಿಕ ಚೌತಿ ಹಬ್ಬ ಮತ್ತು ಸಾರ್ವಜನಿಕ ಕೆಂಡ ಸೇವೆ ಭಾನುವಾರ ನಡೆಯಿತು.

Close