ಪದ್ಮನೂರು ಕ್ರಿಸ್‌ಮಸ್ ಕಾರ್ಯಕ್ರಮ

ಕಿನ್ನಿಗೋಳಿ: ಪ್ರಭು ಯೇಸು ಕ್ರಿಸ್ತನ ಸಂದೇಶವನ್ನು ನಮ್ಮ ಬದುಕಿನಲ್ಲಿ ಪಾಲಿಸಿ, ಅವರ ತತ್ವ ಸಿದ್ಧಾಂತಕ್ಕೆ ಬದ್ದರಾಗಿ ಜೀವನವನ್ನು ಸಾಥ್ಯಕ್ಯ ಗೊಳಿಸುವಲ್ಲಿ ನಾವು ಮನಸ್ಸು ಮಾಡಬೇಕು ಎಂದು ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ಫಾ. ವಿನ್ಸಂಟ್ ಮೊಂತೆರೊ ಹೇಳಿದರು.
ಕಿನ್ನಿಗೋಳಿಯ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಭಾಂಗಣದಲ್ಲಿ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು- ಕಿನ್ನಿಗೋಳಿ ಇದರ ಆಶ್ರಯದಲ್ಲಿ ಸೋಮವಾರ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಟ್ಟೆ ರಾಮಣ್ಣ ಶೆಟ್ಟಿ ಶಾಲಾ ಶಿಕ್ಷಕಿ ಉಷಾ ನರೇಂದ್ರ ಕೆರೆಕಾಡು ಮಾತಾನಡಿ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು ನಾವು ಸೇವಿಸುವ ಗಾಳಿ, ನೀರು, ನಮ್ಮ ಮೈಯಲ್ಲಿ ಹರಿಯುವ ರಕ್ತವು ಒಂದೇ ಆಗಿದ್ದು ಸ್ನೇಹ ಸೌಹಾರ್ದೆಯಿಂದ ಇದ್ದು ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ಪದ್ಮನೂರು ಶಾಲಾ ಶಿಕ್ಷಕಿ ಗಿರಿಜ ಹಾಗೂ ಕಲಾವಿದೆ ನವ್ಯಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಮಿತಿ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್ ಅಧ್ಯಕ್ಷತೆವಹಿಸಿದ್ದರು.
ಮಂಗಳೂರು ನ್ಯಾಷನಲ್ ಟ್ಯುಟೋರಿಯಲ ಕಾಲೇಜು ಪ್ರಾಚಾರ‍್ಯ ಖಾಲಿದ್ ಉಜಿರೆ ಮತ್ತಿತರರು ಉಪಸ್ಥಿತರಿದ್ದರು.
ಕೆ. ಎ ಖಾದರ್ ಸ್ವಾಗತಿಸಿದರು. ಸುನೀತ ಕುಟಿನ್ಹೊ ಹಾಗೂ ವನಿತಾ ಶೆಟ್ಟಿ ಸಮ್ಮಾನಿತರ ಬಗ್ಗೆ ಮಾತನಾಡಿದರು. ಅಶೋಕ ಕುಮಾರ್ ಶೆಟ್ಟಿ ವಂದಿಸಿದರು. ಲಿನೆಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigoli-27121707

Comments

comments

Comments are closed.

Read previous post:
Kinnigoli-27121706
ಯಕ್ಷಗಾನ ಕಲೆ ಶ್ರೇಷ್ಟ ಕಲೆ

ಕಿನ್ನಿಗೋಳಿ: ಯಕ್ಷಗಾನ ವಿಶಿಷ್ಟ ಶ್ರೇಷ್ಟ ಕಲೆಯಾಗಿದ್ದು ಸಮಷ್ಟಿಯ ಕಲೆಯಾಗಿದೆ, ಕಲಾವಿದರನ್ನು ಹಾಗೂ ಕಲೆಯನ್ನು ಬೆಳೆಸಿ ಪೋಷಿಸುತ್ತಿರುವರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಕಟೀಲು ಶ್ರೀ ಕಟೀಲು ದೇವಳದ ಅರ್ಚಕ...

Close