ಪುನರೂರು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣ ನೀಡಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿಸಬೇಕು ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಪುನರೂರು ಭಾರತ ಮಾತಾ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಶಾಲಾ ಸಂಚಾಲಕ ವಿನೋಭನಾಥ್ ಐಕಳ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಸುರೇಶ್ ರಾವ್, ಸಿಆರ್‌ಪಿ. ರಾಮದಾಸ ಭಟ್, ಶಿಕ್ಷ ರಕ್ಷಕ ಸಂಘದ ಅಧ್ಯಕ್ಷೆ ಗಿರಿಜಾ, ಚಂದ್ರಿಕಾ, ಅಂಗನವಾಡಿ ಶಿಕ್ಷಕಿ ಕಸ್ತೂರಿ, ವಿದ್ಯಾರ್ಥಿ ನಾಯಕರಾದ ಶ್ರೀನಾಥ್, ಶ್ರಾವ್ಯ ಜೆ ಉಪಸ್ಥಿತರಿದ್ದರು.
ರಾಘವೇಂದ್ರ ರಾವ್ ಶಾಲಾ ವರದಿ ವಾಚಿಸಿದರು. ಕೃಷ್ಣ ಮೂರ್ತಿ ರಾವ್ ಸ್ವಾಗತಿಸಿದರು. ಕೃಷ್ಣ ರಾವ್, ಜ್ಯೋತಿ ಡಿ ಬಹುಮಾನ ವಿಜೇತರ ವಿವರ ತಿಳಿಸಿದರು. ಹರೀಶ್ ದೇವಡಿಗ ವಂದಿಸಿದರು.

Kinnigoli-27121703

Comments

comments

Comments are closed.

Read previous post:
Kinnigoli-27121702
ಮರ್ಕಝ್ ರುಬಿ ಪ್ರಚಾರ ಸಮಾವೇಶ

ಕಿನ್ನಿಗೋಳಿ: ದೇಶದಲ್ಲಿರುವ ಹಲವಾರು ಪ್ರಸಿದ್ದ ಸ್ಮಾರಕಗಳು ಇಸ್ಲಾಂ ಧರ್ಮದ ಕೊಡುಗೆಗಳಾಗಿದೆ. ನಮ್ಮ ಸಮಾಜದ ಯುವ ಜನತೆಯನ್ನು ಧಾರ್ಮಿಕತೆಯತ್ತ ತರಬೇಕು ಎಂದು ಕರ್ನಾಟಕ ಎಸ್‌ಎಸ್‌ಎಫ್‌ನ ಜೊತೆ ಕಾರ್ಯದರ್ಶಿ ಹಾಫಿಝ್ ಸುಫಿಯಾನ್...

Close