ಯಕ್ಷಗಾನ ಸಂಸ್ಕೃತಿ ಸಂಸ್ಕಾರದ ಕಲೆ

ಕಿನ್ನಿಗೋಳಿ: ಅಕ್ಷರ ಜ್ಞಾನ ಇಲ್ಲದ ಗ್ರಾಮೀಣ ಜನತೆಗೆ ಪೌರಾಣಿಕ ಕಥೆಗಳನ್ನು ಮನಮುಟ್ಟುವಂತೆ ಯಕ್ಷಗಾನ ಕಲಾವಿದರು ಪ್ರದರ್ಶಿಸುತ್ತಿರುವುದರಿಂದ ಅರ್ಥೈಸಿಕೊಳ್ಳುವಲ್ಲಿ ಸಹಕಾರಿಯಾಗಿದೆ ಇಂತಹ ಕಲಾವಿದರನ್ನು ಗೌರವಿಸಿದಲ್ಲಿ ಇನ್ನಷ್ಟು ಕಲಾವಿದರಿಗೆ ಪ್ರೇರಣೆ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ವಠಾರದಲ್ಲಿ ಕಿರು ಷಷ್ಠಿಯ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶವತಾರ ಯಕ್ಷಗಾನ ಮೇಳದಿಂದ 7ನೇ ವರ್ಷದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಮೇಳದ ಕಲಾವಿದರಾದ ಐತಪ್ಪ ಗೌಡ, ಲಕ್ಷ್ಮಣ್ ಕೋಟ್ಯಾನ್, ರವಿ ಶಂಕರ್ ವಳಕುಂಜೆ, ಗಣೇಶ್ ಚಂದ್ರಮಂಡಲ, ವಾದಿರಾಜ ಕಲ್ಲೂರಾಯ ಅವರನ್ನು ಸಮ್ಮಾನಿಸಲಾಯಿತು.
ಗ್ರಾಮದ ಹಿರಿಯರಾದ ಪುರುಷೋತ್ತಮ ಅಚಾರ್ಯ, ಗೋಪಾಲ ಮೂಲ್ಯ, ಆರ್.ಎನ್.ಶೆಟ್ಟಿಗಾರ್, ಸುಂದರ್ ಸಾಲ್ಯಾನ್, ಸಂಘಟಕರಾದ ಭಾಸ್ಕರ ದೇವಾಡಿಗ, ಹಿಮಕರ್, ಗಣೇಶ್ ಪೂಜಾರಿ ಬೆಂಗಳೂರು, ಸಂತೋಷ್‌ಕುಮಾರ್, ಕೇಶವ ದೇವಾಡಿಗ, ದೀಪಕ್ ಸುವರ್ಣ, ಸಂತೋಷ್ ದೇವಾಡಿಗ, ಮುಖೇಶ್ ಸುವರ್ಣ, ಗಣೇಶ್ ದೇವಾಡಿಗ, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.

Kinnigoli-27121708

Comments

comments

Comments are closed.

Read previous post:
Kinnigoli-27121707
ಪದ್ಮನೂರು ಕ್ರಿಸ್‌ಮಸ್ ಕಾರ್ಯಕ್ರಮ

ಕಿನ್ನಿಗೋಳಿ: ಪ್ರಭು ಯೇಸು ಕ್ರಿಸ್ತನ ಸಂದೇಶವನ್ನು ನಮ್ಮ ಬದುಕಿನಲ್ಲಿ ಪಾಲಿಸಿ, ಅವರ ತತ್ವ ಸಿದ್ಧಾಂತಕ್ಕೆ ಬದ್ದರಾಗಿ ಜೀವನವನ್ನು ಸಾಥ್ಯಕ್ಯ ಗೊಳಿಸುವಲ್ಲಿ ನಾವು ಮನಸ್ಸು ಮಾಡಬೇಕು ಎಂದು ಕಿನ್ನಿಗೋಳಿ ಕೊಸೆಸಾಂವ್...

Close