ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ

ಕಿನ್ನಿಗೋಳಿ: ಸಾಮಾಜಿಕ ಕಾರ್ಯಕರ್ತರ ಸಾಧನೆಯನ್ನು ಗುರುತಿಸಿ ಗೌರವಿಸುವುದು ಶ್ಲಾಘನಿಯ ಎಂದು ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎಚ್, ವಸಂತ್ ಬೆರ್ನಾಡ್ ಹೇಳಿದರು.
ಹಳೆಯಂಗಡಿ ಕೊಪ್ಪಳದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ನಡೆದ ಹಳೆಯಂಗಡಿ ಪರಿಸರದ ಸಾಮಾಜಿಕ ಸೇವಾಕರ್ತರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತರಾದ ಜಗದೀಶ್ (ಮೆಸ್ಕಾಂ ಲೈನ್‌ಮ್ಯಾನ್). ವಾಸು ಅಂಚನ್, ಗೋಪೀನಾಥ ಸಿಎಚ್ (ಅಂಚೆಪಾಲಕ), ಮಹಮದ್ ತುಪಾಕಿ (ಹಳೆಯಂಗಡಿ ಪಂಚಾಯತಿ ನೌಕರ), ಸಾದಿಕ್ (ಚಾಲಕ ವೃತ್ತಿ), ವಸಂತ (ದಿನಗೂಲಿ ನೌಕರ) ಅವರನ್ನು ಸನ್ಮಾನಿಸಲಾಯಿತು.
ಕುಳಾಯಿ ನಾರಾಯಣ ಗುರು ಸಂಘದ ಅಧ್ಯಕ್ಷ ಪ್ರಭಾಕರ ಕುಳಾಯಿ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಸೂರ್ಯನಾರಾಯಣ ಎಚ್ ಸುರತ್ಕಲ್, ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಬ್ದುಲ್ ಅಝೀಜ್, ಬಿಜೆಪಿ ನಾಯಕ ಸುಖೇಶ್ ಶೆಟ್ಟಿ ಶಿರ್ತಾಡಿ, ಕೃಷಿಕ ರಮೇಶ್ ಕೋಟ್ಯಾನ್, ಶಂಕರ್ ಬಿ ಕೋಟ್ಯಾನ್, ಇಂದಿರಾ ಸಾಧು ಪೂಜಾರಿ, ಸತ್ಯರಾಜ್ ಉಪಸ್ಥಿತರಿದ್ದರು.
ಸಂಘಟಕ ಸಾಧು ಪೂಜಾರಿ ಸ್ವಾಗತಿಸಿದರು. ಯೋಗೀಶ್ ಸನಿಲ್ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಂದಾರ್ತಿ ಮೇಳದವರಿಂದ ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಿತು.

Kinnigoli-29121706

Comments

comments

Comments are closed.

Read previous post:
Kinnigoli-29121705
ಕಿನ್ನಿಗೋಳಿಯಲ್ಲಿ ಜನಪರ ಉತ್ಸವ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶಗಳಲ್ಲಿರುವ ಜನಪದ ಕಲಾವಿದರನ್ನು ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹಿಸುತ್ತಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಕನ್ನಡ ಮತ್ತು...

Close