ಕಿನ್ನಿಗೋಳಿಯಲ್ಲಿ ಜನಪರ ಉತ್ಸವ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶಗಳಲ್ಲಿರುವ ಜನಪದ ಕಲಾವಿದರನ್ನು ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹಿಸುತ್ತಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯ ಕಲಾವಿದರು ಸಂಘಟನೆಯ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಪರ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀರಾಗಿದ್ದು, ತನ್ನ ಕ್ಷೇತ್ರದಲ್ಲಿ ವಿಧಾನ ಸಭೆಗೆ ಮಹಿಳಾ ಮೀಸಲಾತಿ ಬಂದರೆ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಮಾತನಾಡಿ ೬೦ವರ್ಷ ಮೀರಿದ ಕಲಾವಿದರ ಆರೋಗ್ಯಕ್ಕಾಗಿ ಇಲಾಖೆ ಸಹಾಯ ಹಸ್ತ ಚಾಚುತ್ತದೆ ಎಂದರು.
ದ.ಕ. ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವ್ರಿನ್ ಲೋಬೋ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ತಾಳಿಪಾಡಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘದ ಆನಂದ ಶೆಟ್ಟಿಗಾರ್, ವಿಜಯಕಲಾವಿದರು ಸಂಘಟನೆ ಅಧ್ಯಕ್ಷ ಶರತ್ ಶೆಟ್ಟಿ ಕಿನ್ನಿಗೋಳಿ, ರಾಜೇಶ್ ಕೆಂಚನಕೆರೆ ಮತ್ತಿತರರು ಉಪಸ್ಥಿತರಿದ್ದರು.
ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ತಂಡಗಳ ಇನ್ನೂರಕ್ಕೂ ಹೆಚ್ಚು ಕಲಾವಿದರು ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ನಾಟಕ, ಸುಗಮ ಸಂಗೀತ, ದುಡಿಕುಣಿತ, ಕರಂಗೋಲು, ಸಮೂಹ ನೃತ್ಯ, ಮಾದಿರ ಕುಣಿತ, ವೀರಗಾಸೆ, ತಿತ್ತಿರಿ ತಿರಿ ಮಜಲು ಜಾನಪದ ನೃತ್ಯ, ದಾಸರ ಪದಗಳು ಹೀಗೆ ಸಾಂಸ್ಕೃತಿಕ ವೈಭವವನ್ನು ಸಾರಿದರು.

Kinnigoli-29121705Kinnigoli-291217011 Kinnigoli-291217012 Kinnigoli-291217013

Comments

comments

Comments are closed.

Read previous post:
ಡಿ. 30 : ಕಿನ್ನಿಗೋಳಿಯಲ್ಲಿ ಶೇಣಿ ಸಂಸ್ಮರಣೆ

ಕಿನ್ನಿಗೋಳಿ: ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸುವ ಶೇಣಿ ಶತಮಾನೋತ್ಸವ ಸರಣಿಯ 51ನೇ ಕಾರ್ಯಕ್ರಮ ಕಿನ್ನಿಗೋಳಿ ನೇಕಾರ ಸೌಧದಲ್ಲಿ ಡಿ.30ರ ಶನಿವಾರ ಸಂಜೆ 4ಗಂಟೆಗೆ ನಡೆಯಲಿದೆ. ಪತ್ರಕರ್ತ...

Close