ಮಂಗಳೂರು ಮತ್ತು ಮೂಲ್ಕಿ ಶೂಟೌಟ್

ಕಿನ್ನಿಗೋಳಿ: ಮೂಲ್ಕಿ ಗುತ್ತಿಗೆದಾರ ನಾಗರಾಜ್ ಎಂಬುವವರ ಮನೆಗೆ ಗುಂಡು ಹಾರಿಸಿ ಪರಾರಿಯಾದ ಇಬ್ಬರು ಆರೂಪಿಗಳನ್ನು ಮಂಗಳೂರು ಸಿ.ಸಿ.ಬಿ ಪೋಲೀಸರು ಬಂದಿಸಿದ್ದಾರೆ ಬಂಧಿತರನ್ನು ಮನೋಜ್ ಕುಂದರ್ ಮತ್ತು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಮಂಗಳೂರಿನ ವಸ್ತ್ರ ಮಳಿಗೆ, ಮೂಲ್ಕಿಯ ಗುತ್ತಿಗೆದಾರರ ಮನೆಗೆ ಮತ್ತು ಕಿನ್ನಿಗೋಳಿಯ ರಾಜಶ್ರೀ ಜ್ಯುವೆಲ್ಲರಿಯ ಮುಂಬಾಗದಲ್ಲಿ ಗುಂಡು ಹಾಕಿ ಪರಾರಿಯಾಗಿದ್ದರು. ಆರೋಪಿಗಳು ಮಂಗಳೂರು ಸಿ,.ಸಿ.ಬಿ ಪೂಲೀಸರಿಗೆ ಸೆರೆ ಸಿಕ್ಕಿದ್ದಾರೆ. ಡಿಸೆಂಬರ್ 25ರ ಶನಿವಾರ ರಾತ್ರಿ ಮುಲ್ಕಿಯ ಉದ್ಯಮಿ ನಾಗರಾಜ್ ಎಂಬವರ ‘ಶ್ರೀನಿಧಿ’ಮನೆಗೆ ಏಕಾಏಕಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಾಟ ನಡೆಸಿದ್ದು, ಮನೆಯ ಗೇಟಿನ ಬಳಿ ಬಂದು ಓರ್ವ ದುಷ್ಕರ್ಮಿ ಹೆಲ್ಮೆಟ್ ಹಾಕಿಕೊಂಡು ಕಿಟಿಕಿ ಮೂಲಕ ಎರಡು ಗುಂಡು ಹಾರಿಸಿದ್ದು ಕನ್ನಡಿ ಒಡೆದು ಮನೆಯ ದೇವರ ಕೋಣೆಗೆ ನುಗ್ಗಿ ಹಾನಿಯಾಗಿದೆ. ಬಳಿಕ ಉದ್ಯಮಿ ನಾಗರಾಜ್ ಅವರ ಮನೆಯ ಎದುರು ಪಾರ್ಕಿಂಗ್ ಮಾಡಿದ ಆಡಿ ಕಾರಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ನಾಗರಾಜ ಮುಲ್ಕಿಯಲ್ಲಿ ಉದ್ಯಮಿಯಾಗಿದ್ದು ಕೋಲ್ನಾಡಿನಲ್ಲಿ ಸ್ಪನ್‌ಪೈಪು ಫ್ಯಾಕ್ಟರಿ ಹೊಂದಿದ್ದು ಗುತ್ತಿಗೆದಾರರು ಆಗಿದ್ದಾರೆ.
ಈ ಪ್ರಕರಣ ನಡೆದ ಕೆಲ ದಿನಗಳ ಹಿಂದೆ ಕಿನ್ನಿಗೋಳಿಯ ರಾಜಶ್ರೀ ಎಂಬ ಬಂಗಾರದ ಮಳಿಗೆಯ ಮುಂಬಾಗ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳು ಡಮ್ಮಿ ಗುಂಡು ಹಾಕಿ ಪರಾರಿಯಾಗಿದ್ದು, ಮರುದಿನ ಬೆಳಿಗ್ಗೆ ಭೂಗತ ಪಾತಕಿ ಕಲಿ ಯೋಗೀಶ ಅವರಿಂದ ಸಂದೇಶ ಬಂದಿತ್ತು. ಕಿನ್ನಿಗೋಳಿ ಪ್ರಕರಣದ ಎರಡು ದಿನದ ಅಂತರದಲ್ಲಿ ಮಂಗಳೂರಿನ ಸಂಜೀವ ಶೆಟ್ಟಿ ವಸ್ತ್ರ ಮಳಿಗೆಗೆ ಶೂಟೌಟ್ ನಡೆಸಿ ಪರಾರಿಯಾಗಿದ್ದರು, ಈ ಮೂರು ಪ್ರಕರಣಗಳೂ ಒಂದೇ ತಂಡಕ್ಕೆ ಸೇರಿದ ವ್ಯಕ್ತಿಗಳು ನಡೆಸಿರುವ ಸಾದ್ಯತೆ ಇದೆ ಎಂದು ಮೆಲ್ನೋಟಕ್ಕೆ ಗೋಚರವಾಗುತ್ತಿತ್ತು.
ಮೂಲ್ಕಿ ಮತ್ತು ಕಿನ್ನಿಗೋಳಿ ಪ್ರಕರಣಗಳ ಬಗ್ಗೆ ಮೂಲ್ಕಿ ಠಾಣಾಧಿಕಾರಿ ಅನಂತ ಪದ್ಮನಾಭ ಅವರ ತಂಡ ವಿವಿದ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು . ವಿವಿದೆಡೆಗಳ ಸಿ.ಸಿ.ಕ್ಯಾಮಾರಗಳ ವಿಡಿಯೋಗಳನ್ನು ಕಲೆ ಹಾಕಿ ಪರಿಶೀಲಿಸುತ್ತಿದ್ದರು. ಇದೀಗ ಇಬ್ಬರು ಆರೋಪಿಗಳ ಬಂಧನದಿಂದ ಪೋಲಿಸರು ನಿಟ್ಟುಸಿರು ಬಿಡುವಂತಾಗಿದೆ

ಕಿನ್ನಿಗೋಳಿ ಉದ್ಯಮಿ ಕೊಲೆಗೆ ಸಂಚು ???
ಭೂಗತ ಪಾತಕಿ ಕಲಿ ಯೋಗೀಶ ಕಿನ್ನಿಗೋಳಿಯ ಪ್ರಖ್ಯಾತ ಕೈಸ್ತ ಉದ್ಯಮಿಯೋರ್ವರನ್ನು ಕೊಲೆ ನಡೆಸಲು ತನ್ನ ಸಹಚರರಿಗೆ ಸೂಚಿಸಿದ್ದಾನೆ ಎಂದು ಬಂದಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

Kinnigoli-29121709 Kinnigoli-291217010

Comments

comments

Comments are closed.

Read previous post:
Kinnigoli-29121708
ಗಾಳಕ್ಕೆ ಬಿತ್ತು 25 ಕೆಜಿ ತೂಕದ ಶಾರ್ಕ್ ಮೀನು

ಕಿನ್ನಿಗೋಳಿ: ಪಡುಬಿದ್ರೆಯ ತಬ್ರೇಝ್ ಹಾಗೂ ಹಳೆಯಂಗಡಿಯ ರಮೀಝ್ ಸಸಿಹಿತ್ಲು ಮುಂಡಾ ಕಡಲ ಕಿನಾರೆಯಲ್ಲಿ ಗುರುವಾರ ಸಂಜೆ ಗಾಳ ಹಾಕುತ್ತಿದ್ದ ವೇಳೆ ಬರೋಬ್ಬರಿ 25 ಕೆಜಿ ತೂಕದ ಶಾರ್ಕ್ ಕ್ರೇಟ್...

Close