ಡಿ. 30 : ಕಿನ್ನಿಗೋಳಿಯಲ್ಲಿ ಶೇಣಿ ಸಂಸ್ಮರಣೆ

ಕಿನ್ನಿಗೋಳಿ: ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸುವ ಶೇಣಿ ಶತಮಾನೋತ್ಸವ ಸರಣಿಯ 51ನೇ ಕಾರ್ಯಕ್ರಮ ಕಿನ್ನಿಗೋಳಿ ನೇಕಾರ ಸೌಧದಲ್ಲಿ ಡಿ.30ರ ಶನಿವಾರ ಸಂಜೆ 4ಗಂಟೆಗೆ ನಡೆಯಲಿದೆ.
ಪತ್ರಕರ್ತ ರಘುನಾಥ ಕಾಮತ್ ಅವರಿಂದ ಶೇಣಿ ಸಂಸ್ಮರಣೆ, ಸಾಹಿತಿ, ಕಲಾವಿದ ಶ್ರೀಧರ ಡಿ.ಎಸ್. ಅವರಿಗೆ ಸನ್ಮಾನ, ಶರೋನ್ ಶೆಟ್ಟಿ ಅವರ ಕೃತಿ ನಡೆನುಡಿಯ ಬಿಡುಗಡೆ ಹಾಗೂ ಖ್ಯಾತ ಕಲಾವಿದರಿಂದ ತಾಳಮದ್ದಲೆ ವೀರಮಣಿ ಕಾಳಗ ನಡೆಯಲಿದೆ. ಗಾಯತ್ರೀ ಉಡುಪ ಅಭಿನಂದಿಸಲಿದ್ದು, ಹರಿಕೃಷ್ಣ ಪುನರೂರು, ಎನ್. ಪಿ. ಶೆಟ್ಟಿ, ಹರಿಶ್ಚಂದ್ರ ಸಾಲ್ಯಾನ್, ಐಕಳ ಪ್ರದೀಪ ರೈ ಭಾಗವಹಿಸಲಿದ್ದಾರೆ ಎಂದು ಅನಂತಪ್ರಕಾಶ ಟ್ರಸ್ಟ್‌ನ ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-29121704
ಪಟ್ಟೆ ಶ್ರೀ ಜಾರಂದಾಯ ದೈವಸ್ಥಾನ ಧಾರ್ಮಿಕ ಸಭೆ

ಕಿನ್ನಿಗೋಳಿ: ದೈವ ದೇವರುಗಳ ಭಯ ಭಕ್ತಿಯಿಂದ ಮಾನಸಿಕವಾದ ನೆಮ್ಮದಿ ಸಾದ್ಯ, ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದರು. ಎಳಿಂಜೆ ಪಟ್ಟೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ...

Close