ಅಥರ್ವಶೀರ್ಷ ಗಣಯಾಗ

ಕಿನ್ನಿಗೋಳಿ: ಕಟೀಲು ನಂದಿನಿ ಬ್ರಾಹ್ಮಣ ಸಭಾದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಅಥರ್ವಶೀರ್ಷ ಗಣಯಾಗ ಸಾನಿಧ್ಯ ಸಭಾಭವನದಲ್ಲಿ ವೇದಮೂರ್ತಿ ಕಟೀಲು ರಾಮಚಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು. ಶ್ರೀ ಸುಬ್ರಹ್ಮಣ್ಯ ಭಟ್ ತೋಕೂರು, ಶ್ರೀ ಸುದರ್ಶನ ಆಚಾರ್ಯ, ಶ್ರೀ ಸುಧೀಂದ್ರ ಅಮ್ಮಣ್ಣಾಯ ಋತ್ವಿಜರಾಗಿ ಭಾಗವಹಿಸಿದ್ದರು. ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ ಮಾರ್ಗದರ್ಶನ ನೀಡಿದರು. ಡಾ| ಶಶಿಕುಮಾರ್, ಡಾ| ಎಸ್.ಪದ್ಮನಾಭ ಭಟ್, ವೇದವ್ಯಾಸ ಉಡುಪ, ಸುಬ್ರಹ್ಮಣ್ಯ ಪ್ರಸಾದ್, ಶಿಬರೂರು ಅನಂತ ಆಚಾರ್, ಲಕ್ಷ್ಮೀನಾರಾಯಣ ಭಟ್, ರಾಘವೇಂದ್ರ ಭಟ್, ರಾಮ್ ಗೋಪಾಲ್, ವೆಂಕಟೇಶ ಉಡುಪ, ಲಕ್ಷ್ಮೀಪ್ರಸಾದ್ ಉಡುಪ, ಪ್ರಭಾಕರ ಭಟ್, ದಿವ್ಯದಾಸ್, ಸುಮಂಗಲಾ ಭಟ್, ಸುಧಾ ಉಡುಪ, ದೀಪಿಕಾ ಉಡುಪ ಉಪಸ್ಥಿತರಿದ್ದರು. ಅನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಭಟ್ ತೋಕೂರು ಗಣಪತಿ ಆರಾಧನೆ ಮತ್ತು ಅಥರ್ವಶೀರ್ಷ ಗಣಯಾಗದ ಮಹತ್ವ ವಿವರಿಸಿದರು.

kinnigoli-30121703

Comments

comments

Comments are closed.

Read previous post:
kinnigoli-30121702
ಕಿನ್ನಿಗೋಳಿ: ಸ್ವಚ್ಛತಾ ಕಾರ್ಯಕ್ರಮ

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಂಜೀವಿನಿ ಘಟಕದ ಜಂಟಿ ಆಶ್ರಯದಲ್ಲಿ ಸಮಾಜ ಸೇವಾ ಕಾರ್ಯಚಟುವಟಿಕೆಗಳ ಅಂಗವಾಗಿ ಇತ್ತೀಚೆಗೆ...

Close