ಎನ್‌ಎಸ್‌ಎಸ್ ಶಿಬಿರದ ಸಮಾರೋಪ

ಕಿನ್ನಿಗೋಳಿ: ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರವನ್ನು ಕಂಡುಕೊಳ್ಳುವಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಮಹತ್ವದ ಪರಿಣಾಮ ಬೀರುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಶಿಮಂತೂರು ಶ್ರೀ ಶಾರದಾ ಪ್ರೌಢ ಶಾಲೆಯಲ್ಲಿ ಜರಗಿದ ಶ್ರೀ ಶಾರದಾ ಕಾಲೇಜು ಮಂಗಳೂರು ಇವರ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಶಾರದಾ ಕಾಲೇಜು ಪ್ರಿನ್ಸಿಪಾಲ್ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪಟೇಲ್ ವಾಸುದೇವ ರಾವ್, ಜ್ಯೋತಿಷಿಗಳಾದ ವಿಶ್ವನಾಥ ಭಟ್, ಉಷಾ ವಿಶ್ವನಾಥ ಭಟ್, ಕರುಣಾಕರ ಆಳ್ವ, ಧರ್ಮಾನಂದ ಕುಂದರ್ ಉಪಸ್ಥಿತರಿದ್ದರು.
ಪ್ರೀತಮ್ ಶೆಟ್ಟಿ ವಂದಿಸಿದರು. ದೀಕ್ಷಿತಾ ರಾವ್ ಕಾರ್ಯಕ್ರಮ ನಿರೂಪಿಸಿದರು.

kinnigoli-30121701

Comments

comments

Comments are closed.

Read previous post:
Kinnigoli-291217010
ಮಂಗಳೂರು ಮತ್ತು ಮೂಲ್ಕಿ ಶೂಟೌಟ್

ಕಿನ್ನಿಗೋಳಿ: ಮೂಲ್ಕಿ ಗುತ್ತಿಗೆದಾರ ನಾಗರಾಜ್ ಎಂಬುವವರ ಮನೆಗೆ ಗುಂಡು ಹಾರಿಸಿ ಪರಾರಿಯಾದ ಇಬ್ಬರು ಆರೂಪಿಗಳನ್ನು ಮಂಗಳೂರು ಸಿ.ಸಿ.ಬಿ ಪೋಲೀಸರು ಬಂದಿಸಿದ್ದಾರೆ ಬಂಧಿತರನ್ನು ಮನೋಜ್ ಕುಂದರ್ ಮತ್ತು ಚಂದ್ರಶೇಖರ್ ಎಂದು...

Close