ಕಿನ್ನಿಗೋಳಿ: ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಕೊಲೆಗೈಯಲ್ಪಟ್ಟ ವಸಂತಿ ಶೆಟ್ಟಿ ಅವರ ಮನೆಗೆ ಸೋಮವಾರ ಭೇಟಿ ನೀಡಿ ಅವರ ಪತಿ ಸುಧಾಮ ಶೆಟ್ಟಿ ಅವರಲ್ಲಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು ಸಂತೈಸಿದರು.
ನಂತರ ಮಾದ್ಯಮದವರೊಂದಿಗೆ ಮಾತನಾಡಿ ವಸಂತಿ ಶೆಟ್ಟಿ ಅವರ ಕೊಲೆ ಜಿಲ್ಲೆಯಲ್ಲಿ ನಡೆದ ಭಯಾನಕ ಕೊಲೆಯಾಗಿದ್ದು ಹಾಡು ಹಗಲೇ ಒಬ್ಬ ಮಹಿಳೆಯ ಕೊಲೆ ನಡೆದಿದೆ ಅಂದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನಬಹುದು.
ದ. ಕ ಜಿಲ್ಲೆಯಲ್ಲಿ ದಿನನಿತ್ಯ ಕೊಲೆ ದರೋಡೆಗಳು, ಶೂಟೌಟ್ ಪ್ರಕರಣಗಳಿಂದ ಸಾರ್ವಜನಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಭಾರತದ ಉತ್ತರದ ರಾಜ್ಯಗಳಂತೆ ದಕ್ಷಿಣ ಕನ್ನಡ ಕೂಡ ಜಂಗಲ್ ರಾಜ್ಯವಾಗುತ್ತಿದೆ. ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಶೀಘ್ರ ಬಂಧಿಸುವ ಭರವಸೆ ನೀಡಿದ್ದಾರೆ ಎಂದರು.
ಮೂಲ್ಕಿ ಮೂಡಬಿದ್ರೆ ಬಿಜೆಪಿ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಸಾಲ್ಯಾನ್, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಮಂಗಳೂರು ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಬಿಜೆಪಿ ನಾಯಕರಾದ ಕೆ. ಭುವನಾಭಿರಾಮ ಉಡುಪ, ಸಂತೋಷ್ ಶೆಟ್ಟಿ, ಕಿರಣ್, ರವೀಂದ್ರ, ಅಭಿಲಾಷ್ ಶೆಟ್ಟಿ , ಆದರ್ಶ ಶೆಟ್ಟಿ ಎಕ್ಕಾರು, ಕೇಶವ ಕರ್ಕೇರ, ರಘುವೀರ್ ಕಾಮತ್, ಭಾಸ್ಕರ ಪೂಜಾರಿ ಉಲ್ಲಂಜೆ, ಬಾಸ್ಕರ ಶೆಟ್ಟಿ, ಪುರಂದರ ಶೆಟ್ಟಿ, ದಾಮೋದರ ಸಾಲ್ಯಾನ್ ಪಟ್ಟೆ , ಪ್ರಕಾಶ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ವಸಂತಿ ಶೆಟ್ಟಿ ಕೊಲೆ ಪ್ರಕರಣವನ್ನು ಕಂಡು ಹಿಡಿಯಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪೂಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ, ಆರೋಪಿಗಳ ಸುಳಿವು ಶೀಘ್ರ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

Kinnigoli-02011704

Comments

comments

Comments are closed.

Read previous post:
Kinnigoli-02011703
ಅಜಾರು ಕೊಂಡೆಮೂಲ ರಸ್ತೆ ಲೋಕಾರ್ಪಣೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜ ಅವರು ಅಲ್ಪ ಸಂಖ್ಯಾತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ ನಿಧಿಯಿಂದ ಸುಮಾರು 5 ಲಕ್ಷ ರೂ....

Close