ಅಜಾರು ಕೊಂಡೆಮೂಲ ರಸ್ತೆ ಲೋಕಾರ್ಪಣೆ

ಕಿನ್ನಿಗೋಳಿ: ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜ ಅವರು ಅಲ್ಪ ಸಂಖ್ಯಾತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ ನಿಧಿಯಿಂದ ಸುಮಾರು 5 ಲಕ್ಷ ರೂ. ಗಳ ಅನುದಾನದಲ್ಲಿ ನಿರ್ಮಾಣಗೊಂಡ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜಾರು ಕೊಂಡೆಮೂಲ ಒಂದನೇ ಅಡ್ಡ ರಸ್ತೆಯ ಲೋಕಾರ್ಪಣೆಯನ್ನು ಶನಿವಾರ ದಕ್ಷಿಣ ಕನ್ನಡ ಕಾಂಗ್ರೇಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಗೀತಾ ಉಚ್ಚಿಲ್ ನೆರವೇರಿಸಿದರು. ಕಲ್ಪಿಸಿದ್ದಾರೆ. ಈ ಸಂದರ್ಭ ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಜಯಂತಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಪಿಯುಸ್ ಮೊಂತೆರೋ, ಡೇನಿಯಲ್, ಅಲೆಕ್ಸ್ ತಾವ್ರೊ, ರೋಸಿಪಿಂಟೊ, ಸುನೀಲ್ ಸಿಕ್ವೇರಾ, ಸಂಜೀವ ಮಡಿವಾಳ, ಕೇಶವ ಮತ್ತಿತರರು ಉಪಸ್ಥಿತರಿದ್ದರು.

Kinnigoli-02011703

Comments

comments

Comments are closed.

Read previous post:
Kinnigoli-02011702
ಕೊಡೆತ್ತೂರು ಕೆಸರುಗದ್ದೆ ಕ್ರೀಡಾಕೂಟ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಆದರ್ಶ ಬಳಗದ ವತಿಯಿಂದ ಕೊಡೆತ್ತೂರು ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಭಾನುವಾರ ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಜಯಂತ ಕರ್ಕೇರ, ಗೋಪಾಲ,...

Close