ಕಿನ್ನಿಗೋಳಿ: ಶೇಣಿ ಸಂಸ್ಮರಣೆ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಲೆಯ ಮೂಲಕ ಭಾಷಾ ಜ್ಷಾನ ಹಾಗೂ ಪುರಾಣದ ಸದ್ವಿಚಾರಗಳನ್ನು ಶೇಣಿ ಗೋಪಾಲಕೃಷ್ಣ ಭಟ್ ಪ್ರಚುರ ಪಡಿಸಿದ್ದಾರೆ ಎಂದು ಯಕ್ಷಕವಿ, ಅರ್ಥವಾದಿ, ಪ್ರಸಂಗಕರ್ತ ಶ್ರೀಧರ ಡಿ.ಎಸ್. ಹೇಳಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅನಂತ ಪ್ರಕಾಶ ಟ್ರಸ್ಟ್‌ನ ಸಹಯೋಗದಲ್ಲಿ ಕಿನ್ನಿಗೋಳಿ ನೇಕಾರ ಸೌಧದಲ್ಲಿ ಶನಿವಾರ ನಡೆದ ಶೇಣೀ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಶರೋನ್ ಶೆಟ್ಟಿ ಅವರ ನಡೆ ನುಡಿ ಕೃತಿಯನ್ನು ಹಿರಿಯ ಸಾಹಿತಿ ಎನ್. ಪಿ. ಶೆಟ್ಟಿ ಬಿಡುಗಡೆಗೋಳಿಸಿದರು.
ಪತ್ರಕರ್ತ ರಘುನಾಥ ಕಾಮತ್ ಶೇಣಿ ಸಂಸ್ಮರಣೆ ಭಾಷಣ ಮಾಡಿದರು. ಗಾಯತ್ರೀ ಎಸ್ ಉಡುಪ ಶ್ರೀಧರ ಡಿ.ಎಸ್‌ರನ್ನು ಅಭಿನಂದಿಸಿದರು. ಕಿನ್ನಿಗೋಳಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಮೂಲ್ಕಿ ಹರಿಶ್ಚಂದ್ರ ಸಾಲ್ಯಾನ್, ಕೊಡೆತ್ತೂರು ಸಚ್ಚಿದಾನಂದ ಉಡುಪ, ಐಕಳ ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಪ್ರಸಾದ ಬಲಿಪ, ದಿನೇಶ ಕಾವಳಿಕಟ್ಟೆ, ಸದಶಿವ ಆಳ್ವ ಮತ್ತಿತರರ ಉಪಸ್ಥಿತಿಯಲ್ಲಿ ವೀರಮಣಿ ತಾಳಮದ್ದಲೆ ನಡೆಯಿತು.

Kinnigoli-02011701

Comments

comments

Comments are closed.

Read previous post:
Kinnigoli-3012201713
ಐಕಳ : ಕೊಲೆ ದರೋಡೆ?

 ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯೋರ್ವರಿಗೆ ಚೂರಿಯಿಂದ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ, ಕೊಲೆಗೀಡಾದ ಮಹಿಳೆಯನ್ನು ಐಕಳ ಬಿರ್ಕಿಲ್ ಮನೆ ವಸಂತಿ ಶೆಟ್ಟಿ...

Close