ಹೊಸ ವರ್ಷಾಚರಣೆ

ಮೂಲ್ಕಿ: ಯುವ ಸಮಾಜ ಸಂಘಟಿತರಾಗಿ ಸಮಾಜಮುಖಿ ಕರ್ತವ್ಯಗಳನ್ನು ನಿರ್ವಹಿಸುವ ಕಾರ್ಯಕ್ಕೆ ಭಗವಂತನ ಸಂಪೂರ್ಣ ಆಶೀರ್ವಾದ ಲಭ್ಯವಾಗುತ್ತದೆ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಗುರುಮಂದಿರದ ಅರ್ಚಕ ಶ್ರೀಕೃಷ್ಣ ಶಾಂತಿ ಹೇಳಿದರು.
ಮೂಲ್ಕಿ ನಾರಾಯಣಗುರು ಕ್ರಿಯೇಶನ್ ಕ್ಲಬ್ ಆಶ್ರಯದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಯುವ ಸಮಾಜ ಸೇರಿಕೊಂಡು ಕಷ್ಟದಲ್ಲಿರುವ ದೀನ ವರ್ಗಕ್ಕೆ ಸಹಾಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಹಕಾರ ಬಹುದೊಡ್ಡ ದಾನವಾಗಿದೆ. ಜಾತಿ ಮತ ಭೇಧ ರಹಿತವಾಗಿ ಸಂಘಟಿತರಾಗಿ ಸಾಮರಸ್ಯದಿಂದ ಬಾಳಬೇಕು ಎಂದರು.
ಈ ಸಂದರ್ಭ ಮಾತನಾಡಿದ ಮೂಲ್ಕಿ ಬಿಲ್ಲವ ಸಂಘದ ಆಡಳಿತ ಸಮಿತಿ ಸದಸ್ಯ ಗಿರಿಧರ ಅಮೀನ್, ನಮ್ಮ ಸೀಮಿತ ಆದಾಯದ ಒಂದು ಪಾಲನ್ನು ಅಶಕ್ತರ ಸೇವೆಗಾಗಿ ಮೀಸಲಿಡುತ್ತಾ ಬಂದಿದ್ದು ಭಜನಾ ಸೇವೆಯಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಲಭ್ಯವಾಗಿದೆ ಎಂದರು.
ಈ ಸಂದರ್ಭ ಸಮಾಜ ಸೇವಕ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಿಬ್ಬಂದಿ ವಿಠಲ್ ಕಾಮತ್ ಹಾಗೂ ಭಜನಾ ಸಂಘಟಕ ಗಿರಿಧರ ಅಮೀನ್ ರವರು ನಡೆಸುತ್ತಾ ಬಂದಿರುವ ಸಮಾಜ ಸೇವೆಯನ್ನು ಗೌರವಿಸಿ ವರ್ಷದ ವ್ಯಕ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ರಿಕ್ರಿಯೇಶನ್ ಕ್ಲಬ್‌ನ ಪಳ್ಳಿಗುತ್ತು ಸುರೇಶ್ ಶೆಟ್ಟಿ ವಹಿಸಿದ್ದರು.
ಶ್ರೀ ನಾರಾಯಣ ಗುರು ಸೇವಾದಳದ ಸಂಚಾಲಕ ಕೆ.ರಾಮಾನಾಥ ಸುವರ್ಣ, ಯುವವಾಹಿನಿ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ವಿದ್ಯುತ್ ಗುತ್ತಿಗೆದಾರರ ಸಂಘದ ಎನ್.ಟಿ.ಪೂಜಾರಿ, ನಾರಾಯಣ ಪೂಜಾರಿ,ಉದ್ಯಮಿ ವಿಶ್ವನಾಥ ಸುವರ್ಣ,ನಾಗೇಶ್ ದೇವಾಡಿಗ ಉಡುಪಿ,ಜಯಂತ ದೇವಾಡಿಗ,ಉಮೇಶ ಬಡಗುಹಿತ್ಲು,ಶೈಲೇಶ್,ವಿನಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಚೈಬಾವು ಸ್ವಾಗತಿಸಿದರು. ಸತೀಶ್ ಕಿಲ್ಪಾಡಿ ಅಭಿನಂದಿಸಿದರು.ಜಯಂತ ವಂದಿಸಿದರು.

Kinnigoli-02011706

 

Comments

comments

Comments are closed.

Read previous post:
Kinnigoli-02011705
ಕಟೀಲು ಲಯನ್ಸ್ ಕ್ಲಬ್ ಅಧ್ಯಕ್ಷ ಸೌಂದರ‍್ಯ ರಮೇಶ್

ಕಟೀಲು : ಇಲ್ಲಿನ ನೂತನ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ನ ಪದಗ್ರಹಣ ತಾ.೩ರಂದು ಕಟೀಲು ಸೌಂದರ‍್ಯ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ಲಯನ್ಸ್ ಜಿಲ್ಲಾ ಗವರ್ನರ್ ಎಚ್. ಆರ್. ಹರೀಶ್,...

Close