ಕಟೀಲು ದೇವಳಕ್ಕೆ ಪಾಂಡಿಚೇರಿ ಮುಖ್ಯ ಮಂತ್ರಿ ಭೇಟಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣ ಸ್ವಾಮಿ ಸೋಮವಾರ ಭೇಟಿ ನೀಡಿದರು, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಮುಖ್ಯಮಂತ್ರಿ ಅವರಿಗೆ ದೇವರ ಶೇಷವಸ್ತ್ರ ನೇಡಿ ಗೌರವಿಸಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಅವರು ನನ್ನ ಹುಟ್ಟಿದ ದಿನ ಮತ್ತು ಹೊಸ ವರ್ಷದ ಪ್ರಯುಕ್ತ ದೇವಳಕ್ಕೆ ಭೇಟಿ ನೀಡಿದ್ದೇನೆ, ಕೊಲ್ಲೂರು ಮೂಕಾಂಬಿಕ, ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ಪ್ರತೀ ವರ್ಷ ಜನವರಿ ಒಂದರಂದು ವಿವಿಧ ಕಡೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು. ಈ ಸಂದರ್ಭ ಸಚಿವ ಅರ್ಮುಗಂ, ಎಂ.ಸಿ. ಕುಮಾರ್, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಕಟೀಲು ಅರ್ಚಕ ವೆಂಕಟರಮಣ ಆಸ್ರಣ್ಣ, ಗ್ರಾಮ ಕರಣೀಕ ಪ್ರದೀಪ್ ಶಣೈ, ಪ್ರಬಂಧಕ ತಾರಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-02011707

Comments

comments

Comments are closed.

Read previous post:
Kinnigoli-02011706
ಹೊಸ ವರ್ಷಾಚರಣೆ

ಮೂಲ್ಕಿ: ಯುವ ಸಮಾಜ ಸಂಘಟಿತರಾಗಿ ಸಮಾಜಮುಖಿ ಕರ್ತವ್ಯಗಳನ್ನು ನಿರ್ವಹಿಸುವ ಕಾರ್ಯಕ್ಕೆ ಭಗವಂತನ ಸಂಪೂರ್ಣ ಆಶೀರ್ವಾದ ಲಭ್ಯವಾಗುತ್ತದೆ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಗುರುಮಂದಿರದ ಅರ್ಚಕ ಶ್ರೀಕೃಷ್ಣ...

Close