ಪುನರೂರು ಪ್ರತಿಷ್ಠಾನ : ಪ್ರಥಮ ವರ್ಷ ಸಂಭ್ರಮ

ಕಿನ್ನಿಗೋಳಿ: ಸಮಾಜಮುಖಿ ಕಾರ್ಯಗಳನ್ನು ಪುನರೂರು ಪ್ರತಿಷ್ಠಾನ ಮಾಡುತ್ತಿದ್ದು ಸಮಾಜದ ಅಭಿವೃದ್ಧಿಯಲ್ಲಿ ಇತರರಿಗೆ ಮಾದರಿಯಾಗಿದೆ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪುನರೂರು ಪ್ರತಿಷ್ಠಾನದ ವತಿಯಿಂದ ಪುನರೂರು ಶ್ರೀವಿಶ್ವನಾಥ ದೇವಳದಲ್ಲಿ ಸೋಮವಾರ ನಡೆದ ಪುನರೂರು ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅದ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಗಳಿಕೆಯ ಒಂದು ಅಂಶವಾದರೂ ಅರ್ಹರಿಗೆ ಅಥವಾ ಸಮಾಜದ ಅಭಿವೃದ್ದಿಗೆ ಮೀಸಲಿರಿಸಿದರೆ ಮಾನಸಿಕ ನೆಮ್ಮದಿಯ ಬದುಕು ಜೀವನ ನಮ್ಮದಾಗುತ್ತದೆ ಎಂದರು.
ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಪ್ರತಿಭಾ ಸೌರಭ ೨೦೧೭ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಗಳ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು.
ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್ ಪುನರೂರು, ಉದ್ಯಮಿ ಪಟೇಲ್ ವಾಸುದೇವ ರಾವ್, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್ ಕೆ ಉಷಾರಾಣಿ, ಪುನರೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಉಪಾಧ್ಯಕ್ಷರಾದ ರಾಧಿಕಾ ಸುಧೀರ್, ಮಲ್ಲಿಕಾ ಅರವಿಂದ್, ಕೋಶಾಧಿಕಾರಿ ಚಂದ್ರಿಕಾ ಸುಧೀರ್ ಮತ್ತು ಮೂಲ್ಕಿ ಜನ ವಿಕಾಸ ಸಮಿತಿ ಅಧ್ಯಕ್ಷ ಸುರೇಶ್ ರಾವ್ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಪ್ರಾಣೇಶ್ ಭಟ್ ದೇಂದಡ್ಕ ವಾರ್ಷಿಕ ವರದಿ ವಾಚಿಸಿದರು. ಚಂದ್ರಿಕಾ ಸುಧೀರ್ ವಂದಿಸಿದರು. ರಾಜೇಶ್ ಭಟ್ ನಂದಿಕೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ತಂಡದಿಂದ ಸಾಂಸ್ಕ್ರತಿಕ ವ್ಯೆಭವ ಕಾರ್ಯಕ್ರಮ ನಡೆಯಿತು.

Kinnigoli-03011801

Comments

comments

Comments are closed.

Read previous post:
Kinnigoli-02011707
ಕಟೀಲು ದೇವಳಕ್ಕೆ ಪಾಂಡಿಚೇರಿ ಮುಖ್ಯ ಮಂತ್ರಿ ಭೇಟಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣ ಸ್ವಾಮಿ ಸೋಮವಾರ ಭೇಟಿ ನೀಡಿದರು, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಮುಖ್ಯಮಂತ್ರಿ ಅವರಿಗೆ ದೇವರ...

Close