ಐಕಳ ಗ್ರಾಮ ಸಭೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಕಳ, ಉಳೆಪಾಡಿ, ಏಳಿಂಜೆ ಗ್ರಾಮಗಳ ಎರಡನೆಯ ಹಂತದ ಗ್ರಾಮ ಸಭೆ ಮಂಗಳವಾರ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆಯಲ್ಲಿ ರಾಜೀವ ಗಾಂಧಿ ಸಭಾ ಭವನದಲ್ಲಿ ನಡೆಯಿತು.
ಐಕಳ ಗ್ರಾಮ ಪಂಚಾಯಿತಿಯಲ್ಲಿ ಕಳೆದ 20 ವರ್ಷಗಳಿಂದ ಕೇವಲ ನಿವೇಶನ ರಹಿತರ ಪಟ್ಟಿ ತಯಾರು ಮಾಡುತ್ತಿದ್ದು ಪ್ರತೀ ಗ್ರಾಮ ಸಭೆಯಲ್ಲಿ ಕೇವಲ ಭರವಸೆ ಮಾತ್ರ ದೊರೆಯುತ್ತದೆ. ಕಳೆದ ಗ್ರಾಮ ಸಭೆಯಲ್ಲಿ ಕಂಗುರಿಯಲ್ಲಿ 2 ಎಕರೆ ಜಾಗ ಗೊತ್ತು ಪಡಿಸಿದ್ದು ನಿವೇಶನ ಹಂಚಿಕೆಯಾಗಿಲ್ಲ ಯಾಕೇ? ಸರಕಾರಿ ಜಾಗ ಇಲ್ಲ ಎಂಬ ಕುಂಟು ನೆಪ ಯಾಕೆ ಎಂದು ಗ್ರಾಮಸ್ಥ ವಸಂತ್ ಹಾಗೂ ಮತ್ತಿತರರು ಕೇಳಿದಾಗ ಜಿಲ್ಲಾಡಳಿತದಿಂದ ಅದರ ಬಗ್ಗೆ ಮಾಹಿತಿ ಬಂದಿಲ್ಲ ಬಂದ ಕೂಡಲೇ ನಿವೇಶನ ಹಂಚಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ದಿವಾಕರ ಚೌಟ ತಿಳಿಸಿದರು.
೧೫ ಕೋಟಿಯ ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ನೀರು ಸರಿಯಾಗಿ ಬರುತ್ತಿಲ್ಲ ಬಂದರೂ ಉಪ್ಪು ನೀರು ಬರುತ್ತಿದೆ ಜನರ ಹಣ ಪೋಲಾಗುತ್ತಿದೆ ಎಂದು ಉಳೆಪಾಡಿ ನಿವಾಸಿ ಕೃಷ್ಣ ಉಳೆಪಾಡಿ ಕೇಳಿದಾಗ ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆಲಸ ಸದ್ಯ ಸ್ಥಗಿತಗೊಂಡಿದ್ದು ಮರು ಟೆಂಡರ್ ನಡೆಸಲಾಗಿದೆ ತಾಂತ್ರಿಕ ವೈಫಲ್ಯ ಸರಿಪಡಿಸಿದ ಕೂಡಲೇ ಸಂಬಂಧ ಪಟ್ಟ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುವುದು. ಉಪ್ಪು ನೀರಿನ ಸಮಸ್ಯೆ ನಿವಾರಿಸಲು ಇನ್ನೊಂದು ಅಣೆಕಟ್ಟು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದೂಜಲಗುರಿ ರಸ್ತೆ ಸಮರ್ಪಕವಾಗಿಲ್ಲ, ದಾರಿ ದೀಪ ಇಲ್ಲ, ಕುಡಿಯುವ ನೀರಿನ ಯೋಜನೆ ಮಳೆಗಾಲದಲ್ಲಿ ಮಾತ್ರ ಬರುತ್ತಿದೆ ಪಂಚಾಯಿತಿ ಅನುದಾನ ಇಲ್ಲದಿದ್ದರೆ ಶಾಸಕ ಅಥವಾ ಸಂಸದರ ನಿಧಿ ಉಪಯೋಗಿಸಿ ಕೆಲಸ ಮಾಡಿಸಿ ಕೊಡಬೇಕು ಎಂದು ದೂಜಲಗುರಿ ನಿವಾಸಿ ಶರತ್ ತಿಳಿಸಿದಾಗ ಐಕಳ ಗ್ರಾಮ ಪಂಚಾಯಿತಿಗೆ 75 ಲಕ್ಷ ರೂ ಅನುದಾನ ಬಂದಿದೆ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳಿಗೂ ಆದ್ಯತೆಯ ಮೇರೆಗೆ ಅನುದಾನ ಹಂಚಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸ್ಥಳಂತಗುತ್ತು ರಸ್ತೆಯಲ್ಲಿ ನಾದುರಸ್ಥಿ, ಮೋರಿ ರಚನೆ ಮಾಡಿ, ಉಳೆಪಾಡಿಯಲ್ಲಿ ನೀರಿನ ಟ್ಯಾಂಕ್‌ನ ಸಿಮೆಂಟ್ ತುಂಡುಗಳು ಉದುರುತ್ತವೆ ಎಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಆಗ್ರಹಿಸಿದರು.
ವಲಯ ಅರಣ್ಯಧಿಕಾರಿ ಚಿದಾನಂದ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಅನಿತಾ ಪಿಂಟೋ, ಮಕ್ಕಳ ಕಲ್ಯಾಣ ಇಲಾಖೆಯ ಶೀಲಾವತಿ, ಕಂದಾಯ ಇಲಾಖೆಯ ಮಂಜುನಾಥ, ಡಾ. ಭಾಸ್ಕರ ಕೋಟ್ಯಾನ್, ಸದಾನಂದ ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ ಸಾಲ್ಯಾನ್, ಸದಸ್ಯರಾದ ರವಿಂದ್ರ, ಕಿರಣ್ ಕುಮಾರ್, ದಯಾವತಿ, ರೇಖಾ ಶೆಟ್ಟಿ, ಸಂಜೀವ ಶೆಟ್ಟಿ, ರಾಜೇಶ್, ಯೋಗೀಶ್ ಕೋಟ್ಯಾನ್, ಸರಿತಾ, ಪವಿತ್ರಾ, ಸುಧಾಕರ ಸಾಲ್ಯಾನ್ ಉಪಸ್ಥಿತರಿದ್ದರು. ಪಿಡಿಓ ನಾಗರತ್ನ ಜಿ ವಂದಿಸಿದರು.

Kinnigoli-04011801

Comments

comments

Comments are closed.

Read previous post:
Kinnigoli-03011801
ಪುನರೂರು ಪ್ರತಿಷ್ಠಾನ : ಪ್ರಥಮ ವರ್ಷ ಸಂಭ್ರಮ

ಕಿನ್ನಿಗೋಳಿ: ಸಮಾಜಮುಖಿ ಕಾರ್ಯಗಳನ್ನು ಪುನರೂರು ಪ್ರತಿಷ್ಠಾನ ಮಾಡುತ್ತಿದ್ದು ಸಮಾಜದ ಅಭಿವೃದ್ಧಿಯಲ್ಲಿ ಇತರರಿಗೆ ಮಾದರಿಯಾಗಿದೆ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಪುನರೂರು ಪ್ರತಿಷ್ಠಾನದ ವತಿಯಿಂದ ಪುನರೂರು...

Close