ಮಹಿಳೆಯರ ಬ್ಯಾಂಕ್ ವ್ಯವಹಾರ ಆಕರ್ಷಿಸಿದೆ

ಹಳೆಯಂಗಡಿ: ಭಾರತದ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಬ್ಯಾಂಕ್ ವ್ಯವಹಾರವನ್ನು ಮುಕ್ತವಾಗಿ ನಡೆಸುತ್ತಿರುವುದು ವಿಶ್ವಮಟ್ಟದಲ್ಲಿ ಆಕರ್ಷಿಸಿದೆ. ಅಮೇರಿಕಾದಲ್ಲಿ ಶೇರು ಮಾರುಕಟ್ಟೆಯ ವ್ಯವಹಾರಕ್ಕೆ ಮಹಿಳೆಯರು ಒಟ್ಟಾದರೆ ಇಲ್ಲಿ ಸ್ವಾವಲಂಬಿ ಬದುಕಿಗೆ ಸಂಘಟನಾತ್ಮಕವಾಗಿ ಒಗ್ಗೂಡಿರುವುದು ವಿಶೇಷವಾಗಿದೆ ಎಂದು ಯುಎಸ್‌ಎಯ ಇದರ ಯು ಪೆನ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಪ್ರೋ. ಫೆಮಿದಾ ಹಾಂಡಿ ಹೇಳಿದರು.
ಹಳೆಯಂಗಡಿಯ ಪಡುಪಣಂಬೂರು ವ್ಯವಸಾಯ ಸಹಕಾರ ಸಂಘದಲ್ಲಿ  ನವೋದಯ ಸ್ವಸಹಾಯ ಗುಂಪುಗಳ ಕಾರ್ಯ ಚಟುವಟಿಕೆಯನ್ನು ಅಭ್ಯಸಿಸಲು ತಮ್ಮ ವಿ.ವಿ.ಯ 7 ಮಂದಿ ವಿದ್ಯಾರ್ಥಿ ಸಮೂಹದೊಂದಿಗೆ ಆಗಮಿಸಿದಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೇರಿಕಾದಲ್ಲಿ ಕಲೆ, ಸಾಂಸ್ಕೃತಿಕ, ಕ್ರೀಡೆ ಹಾಗೂ ಶಿಕ್ಷಣಕ್ಕೆಂದು ಸಣ್ಣ ಪುಟ್ಟ ಸಂಘಗಳಿದೆ ಆದರೆ ಮಹಿಳೆಯರ ಸಬಲೀಕರಣಕ್ಕಾಗಿ, ಸ್ವ ಸಹಾಯದ ವ್ಯವಹಾರ ಜ್ಞಾನಕ್ಕಾಗಿ ನಿರ್ದಿಷ್ಟ ಸಂಘಗಳಿಲ್ಲ, ಭಾರತದಲ್ಲಿ ಗ್ರಾಮೀಣ ಭಾಗದಲ್ಲೂ ಸಹ ಇಂತಹ ವ್ಯವಹಾರಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ನಗರದಿಂದ ಗ್ರಾಮ ಮಟ್ಟದಲ್ಲಿ ಬ್ಯಾಂಕ್‌ಗಳು ಸ್ಥಾಪನೆ ಆಗಿರುವುದು ಮೆಚ್ಚುವಂತದ್ದು, ನಮ್ಮಲ್ಲಿ ಹತ್ತಿರದಲ್ಲಿಯೇ ಬ್ಯಾಂಕ್ ಇದ್ದರೂ ಖಾತೆಯನ್ನು ತೆರೆಯದವರೂ ಸಹ ಇದ್ದಾರೆ. ಆದರೆ ಈಗ ಅಲ್ಲಿಯೂ ಬದಲಾವಣೆ ಆಗುತ್ತಿದೆ ಎಂದರು.
ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು ಅಧ್ಯಕ್ಷತೆಯನ್ನು ವಹಿಸಿ, ಹಾಲನ್ನು ಕಲಶಕ್ಕೆ ಸುರಿಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್, ಹಳೆಯಂಗಡಿಯ ಪಿಸಿಎ ಬ್ಯಾಂಕ್, ಅಮೃತಬಿಂಧು ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಂಯೋಜಿಸಲಾಯಿತು.
ಬ್ಯಾಂಕ್‌ನ ಉಪಾಧ್ಯಕ್ಷೆ ಮೀರಾ ಬಾಯಿ, ನಿರ್ದೇಶಕರುಗಳಾದ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಜಯರಾಮ ಆಚಾರ್ಯ, ವಿನೋದ್ ಕುಮಾರ್ ಬೊಳ್ಳೂರು, ರೋಹಿಣಿ ಶೆಟ್ಟಿ, ಹಿಮಕರ ಅರ್. ಪುತ್ರನ್ ಕದಿಕೆ, ಎಚ್. ವಸಂತ ಬೆರ್ನಾಡ್, ಪಿ. ಶಂಕರ್, ನವೀನ್ ಪ್ರಭಾರ ಕಾರ್ಯನಿರ್ವಾಹಣಾಽಕಾರಿ ಪುರುಷೋತ್ತಮ ಕೋಟ್ಯಾನ್ ತೋಕೂರು, ನಿಯೋಗದ ಸಮನ್ವಯಕಾರ ವಿನೋದ್ ದೀಕ್ಷಿತ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಹಿರಿಯ ಅಽಕಾರಿ ಪದ್ಮನಾಭ, ಸುಪರ್‌ವೈಸರ್ ಸುದರ್ಶನ್, ಒಕ್ಕೂಟದ ಅಧ್ಯಕ್ಷೆ ಸುಲೋಚನಿ, ಪ್ರೇರಕಿ ಸ್ವಾತಿ ಉಪಸ್ಥಿತರಿದ್ದರು.
ನಿಶಾ ಸ್ವಾಗತಿಸಿದರು, ಪ್ರಶಾಂತಿ ವರದಿ ವಾಚಿಸಿದರು, ಪ್ರಮೀಳಾ ಪಂಜ ನಿರೂಪಿಸಿದರು.

Kinnigoli-04011804

 

 

 

Comments

comments

Comments are closed.

Read previous post:
Kinnigoli-04011803
ಹೇಮಚಂದ್ರ 

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಎಸ್ಕೋಡಿ ನಿವಾಸಿ ಕರ್ನಾಟಕ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಮ್ಯಾನೇಜರ್ ಹೇಮಚಂದ್ರ (65) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದರು. ಅವರು ಪತ್ನಿ...

Close