ಜೋಡುಬೈಲು ಬಾಬಾ ಕೋಡಿ ಫ್ರೆಂಡ್ಸ್ ಉದ್ಘಾಟನೆ

ಕಿನ್ನಿಗೋಳಿ: ಸಮಾಜದ ಕುಂದು ಕೊರತೆಗಳು ನೀಗಿಸಲು ಸರಕಾರದೊಂದಿಗೆ ಸೇವಾ ಸಂಸ್ಥೆಗಳು ಹಾಗೂ ಸಂಘಟನೆಗಳು ಕೂಡಾ ಕೈ ಜೋಡಿಸಿ ಪೂರಕ ಕೆಲಸ ಕಾರ್ಯಗಳನ್ನು ನಡೆಸಬೇಕು ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಹೆಗ್ಡೆ ಹೇಳಿದರು.
ಸೋಮವಾರ ನಡೆದ ಕಿನ್ನಿಗೋಳಿ ಜೋಡುಬೈಲು ಬಾಬಾಕೋಡಿ ಪ್ರೆಂಡ್ಸ್ ಇದರ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜಕೀಯ ರಹಿತವಾಗಿ ಜನಪರ ಚಿಂತನೆಯ ಮೂಲಕ ಸಂಘಟನೆಗಳು ಕಾರ್ಯಾಚರಿಸಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ಸಾಧಕರಾದ ಕೃಷಿಕ ರಮೇಶ್ ರಾವ್ ಪುನರೂರು, ಕರಾಟೆ ಪ್ರಶಸ್ತಿ ವಿಜೇತೆ ಶ್ರುತಿ ಕುಲಾಲ್, ಸಾಧಕಿ ಅಲ್ವಿಶಾ ಸಲ್ದಾನಾ, ಹಿರಿಯ ನಾಗರಿಕೆ ಸಿಸಿಲಿಯಾ ಲೂವಿಸ್, ಸಾರ್ವಜನಿಕ ಸೇವೆಯ ಸ್ವಚ್ಚತಾ ಪೌರ ಕಾರ್ಮಿಕರಾದ ಬೊಗ್ಗು, ಐತಪ್ಪ, ಆನಂದ, ಶ್ರೀಧರ, ಹರೀಶ್, ಮೆಸ್ಕಾಂ ಸಿಬ್ಬಂದಿಗಳಾದ ದಯಾನಂದ, ದುರ್ಗಾಪ್ರಸಾದ್, ಪ್ರಕಾಶ್, ಕಾಜು ಸಾಹೇಬ್, ಗೃಹ ರಕ್ಷಕ ದಳದ ಅಹಮ್ಮದ್ ಭಾವ, ರಮ್ಯ ಮೂಲ್ಕಿ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ನಾಯಕ ಈಶ್ವರ್ ಕಟೀಲು, ಉದ್ಯಮಿ ರೋಕಿ ಪಿಂಟೋ, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಜೋಡುಬೈಲು ಬಾಬಾ ಕೋಡಿ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್, ಉಪಾಧ್ಯಕ್ಷ ಮೈಕಲ್ ಪಿಂಟೊ, ಕೋಶಾಧಿಕಾರಿ ನವೀನ್ ಡಿಸೋಜ ಉಪಸ್ಥಿತರಿದ್ದರು.
ವಿನ್ಸಂಟ್ ಡಿಕೋಸ್ತಾ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀಶಾ ಸರಾಫ್ ಐಕಳ ಹಾಗೂ ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-04011802

Comments

comments

Comments are closed.

Read previous post:
Kinnigoli-04011801
ಐಕಳ ಗ್ರಾಮ ಸಭೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಕಳ, ಉಳೆಪಾಡಿ, ಏಳಿಂಜೆ ಗ್ರಾಮಗಳ ಎರಡನೆಯ ಹಂತದ ಗ್ರಾಮ ಸಭೆ ಮಂಗಳವಾರ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆಯಲ್ಲಿ ರಾಜೀವ...

Close