ಫೇಮಸ್ ಯೂತ್ ಕ್ಲಬ್ 30ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಘಟನೆ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉಪಯುಕ್ತ ಮಾಹಿತಿ ಹಾಗೂ ಸಹಾಯ ಹಸ್ತ ನೀಡಿದಾಗ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಮಂಗಳೂರು ಮಹಾನಗರಪಾಲಿಕೆ ಮೇಯರ್ ಕವಿತಾ ಸನಿಲ್ ಹೇಳಿದರು.
ಶನಿವಾರ ೧೦ನೇ ತೋಕೂರು ಫೇಮಸ್ ಯೂತ್ ಕ್ಲಬ್‌ನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕಾರ್ಯಕ್ರಮ ಉದಾಟಿಸಿದರು. ಯುವ ವಾಗ್ಮಿ ಸಹನಾ ಕುಂದರ್ ದಿಕ್ಸೂಚಿ ಬಾಷಣಗೈದರು.
ಈ ಸಂದರ್ಭ ಸಾಧಕರಾದ ಶಂಕರ ಮಾಸ್ಟರ್, ಗೌತಮ್ ಶೆಟ್ಟಿ, ಯತೀಶ್ ಕುಮಾರ್, ರಿತಿಕಾ ಎಚ್. ಪೂಜಾರಿ, ಪ್ರದೀಪ್ ಕುಮಾರ್, ಯೋಗೀಶ್ ಪದಕಣ್ಣಾಯ, ಕಸ್ತೂರಿ ಪಂಜ, ಕವಿತಾ ಸನಿಲ್, ಗುರುರಾಜ ಎಸ್. ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಕ್ಲಬ್ ಅಧ್ಯಕ್ಷ ಸುಧೀರ್ ಎಂ. ಭಂಡಾರಿ, ಕಾರ್ಯದರ್ಶಿ ದುರ್ಗಾಪ್ರಸಾದ, ಕೋಶಾಧಿಕಾರಿ ಸುಜಿತ್ ಆಚಾರ್ಯ ತೋಕೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-05011801

Comments

comments

Comments are closed.

Read previous post:
Kinnigoli-04011804
ಮಹಿಳೆಯರ ಬ್ಯಾಂಕ್ ವ್ಯವಹಾರ ಆಕರ್ಷಿಸಿದೆ

ಹಳೆಯಂಗಡಿ: ಭಾರತದ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಬ್ಯಾಂಕ್ ವ್ಯವಹಾರವನ್ನು ಮುಕ್ತವಾಗಿ ನಡೆಸುತ್ತಿರುವುದು ವಿಶ್ವಮಟ್ಟದಲ್ಲಿ ಆಕರ್ಷಿಸಿದೆ. ಅಮೇರಿಕಾದಲ್ಲಿ ಶೇರು ಮಾರುಕಟ್ಟೆಯ ವ್ಯವಹಾರಕ್ಕೆ ಮಹಿಳೆಯರು ಒಟ್ಟಾದರೆ ಇಲ್ಲಿ ಸ್ವಾವಲಂಬಿ ಬದುಕಿಗೆ...

Close