ಜನವಿಕಾಸ ಸಮಿತಿ : ಗೀತಾ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ಪುನರೂರು ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಮೂಲ್ಕಿ ಜನವಿಕಾಸ ಸಮಿತಿಗೆ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತೆ ಗೀತಾ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಅವರ ಅಧ್ಯಕ್ಷತೆಯಲ್ಲಿ ಮೂಲ್ಕಿಯ ಸ್ವಾಗತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷೆ ಭಾಗ್ಯ ರಾಜೇಶ್, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಭಟ್, ಸಹ ಕಾರ್ಯದರ್ಶಿಗಳಾಗಿ ಪ್ರಶಾಂತಿ ಶೆಟ್ಟಿ ಮತ್ತು ಪ್ರಾಣೇಶ್ ಭಟ್ ದೇಂದಡ್ಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಪಿ. ಎಸ್. ಸುರೇಶ್ ರಾವ್, ಆನಂದ ಮೇಲಾಂಟ, ಶೋಭಾ ರಾವ್, ದಾಮೋದರ ಶೆಟ್ಟಿ, ಜೀವನ್ ಶೆಟ್ಟಿ ಅಂಗರಗುಡ್ಡೆ, ಶಶಿಕರ ಕೆರೆಕಾಡು ಅವರು ಆಯ್ಕೆಯಾಗಿದ್ದಾರೆ.

Kinnigoli-05011804

Comments

comments

Comments are closed.

Read previous post:
Kinnigoli-05011803
ಗುತ್ತಕಾಡು ನಾಗರಿಕ ಹಿತರಕ್ಷಣಾ ವೇದಕೆ

ಕಿನ್ನಿಗೋಳಿ: ಜನಪರವಾಗಿ ಸೌರ್ಹಾದತೆಯಿಂದ ಗ್ರಾಮದ ಅಭಿವೃದ್ಧಿಯಲ್ಲಿ ಬೆರೆತು ಸಂಘಸಂಸ್ಥೆಗಳ ಅವಶ್ಯಕತೆ ಇದೆ ಎಂದು ಉದ್ಯಮಿ ಮಹಾಬಲ ಪೂಜಾರಿ ಕಡಂಬೊಡಿ ಹೇಳಿದರು. ಇತ್ತೀಚೆಗೆ ಗುತ್ತಕಾಡು ತಾಳಿಪಾಡಿ ಬಿಲ್ಲವ ಸಂಘದ ವೇದಿಕೆಯಲ್ಲಿ...

Close