ಕೆಮ್ರಾಲ್ ಶಾಲಾ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಊರಿನ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿಲ್ಲ ಸರಕಾರ ಜನರ ಸೇವೆ ಮಾಡಲು ಅವಕಾಶ ನೀಡಿದೆ ಆದುದರಿಂದ ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಶುಕ್ರವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ ಪೇಟೆಯಿಂದ ಸಂತ ಜೂದರ ಹಿರಿಯ ಪಾಥಮಿಕ ಶಾಲೆಗೆ ಹೋಗುವ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿ ತನ್ನ ಅನುದಾನದಿಂದ ಈ ಮೊದಲು ಒಂದು ಲಕ್ಷ ನೀಡಿಲಾಗಿತ್ತು ಆದರೆ ತೀರ ಹದಗೆಟ್ಟಿರುವ ರಸ್ತೆಗಾಗಿ ಮತ್ತೆ ಐದು ಲಕ್ಷ ನೀಡಲಾಗಿದೆ. ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ ತನ್ನ ಪ್ರಯತ್ನದಿಂದ ಸುಮಾರು ೧೬ ಕೋಟಿ ರೂ.ಗಳಷ್ಟು ಮೊತ್ತದ ಯೋಜನೆಗಳನ್ನು ತರಲಾಗಿದೆ ಎಂದು ಹೇಳಿದರು.
ಪಕ್ಷಿಕೆರೆ ಸಂತ ಜೂದರ ಹಿರಿಯ ಪಾಥಮಿಕ ಶಾಲಾ ಸಂಚಾಲಕ ಫಾ. ಆಂಡ್ರ್ಯೂ ಲಿಯೋ ಡಿಸೋಜ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್, ಪಿಡಿಓ ರಮೇಶ್ ರಾಥೋಡ್, ಕಾಂಗ್ರೆಸ್ ಮುಖಂಡ ಗುರುರಾಜ ಎಸ್ ಪೂಜಾರಿ, ಮಯ್ಯದ್ದಿ ಪಕ್ಷಿಕೆರೆ, ಲೀಲಾ, ಹರಿಪ್ರಸಾದ್, ಹರೀಶ್ ಶೆಟ್ಟಿ, ರಿಚಾರ್ಡ್ ಡಿಸೋಜ, ಗೋಪಿನಾಥ ಪಡಂಗ, ಸಾಹುಲ್ ಹಮೀದ್, ಮಹಮ್ಮದ್ ಗುಲಾಂ, ಜಾಕ್ಸನ್ ಪಕ್ಷಿಕೆರೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-06011801

Comments

comments

Comments are closed.

Read previous post:
Kinnigoli-05011806
ಜಂತು ಹುಳ ನಿವಾರಣಾ ಕಾರ್ಯಕ್ರಮ

ಕಿನ್ನಿಗೋಳಿ: ಹಾಲಿನ ಗುಣಮಟ್ಟ ಉತ್ತಮವಾಗಿಸಲು ವೈಜ್ಞಾನಿಕವಾಗಿ ಹೈನು ರಾಸು ನಿರ್ವಹಣೆ ಅತ್ಯಗತ್ಯ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ ಸತ್ಯನಾರಾಯಣ ಹೇಳಿದರು ಕರ್ನಿರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ...

Close