ನಡುಗೋಡು ಬಯಲು ರಂಗ ವೇದಿಕೆ ಉದ್ಘಾಟನೆ

ಕಿನ್ನಿಗೋಳಿ: ಹಳೆ ವಿದ್ಯಾರ್ಥಿ ಸಂಘ (ರಿ) ನಡುಗೋಡು ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘ(ರಿ.) ನಡುಗೋಡು ಇದರ ವಾರ್ಷಿಕೋತ್ಸವ ಜನವರಿ 7 ಬಾನುವಾರ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮ ಉದ್ಘಾಟನೆ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಅಪರಾಹ್ನ 4.30 ರಿಂದ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದ್ದು ತದನಂತರ ಥಂಡರ್ ಗೈಸ್ ಫೌಂಡೇಶನ್ (ರಿ.) ಬಜ್ಪೆ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ಹಾಗೂ ತರುಣ ಶಕ್ತಿ ಕಲಾವಿದರು ಕೊಡೆತ್ತೂರು ಇವರಿಂದ “ಪಿರ ಬನ್ನಗ”ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಈ ಸಂದರ್ಭ ದ.ಕ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಹಳೆ ವಿದ್ಯಾರ್ಥಿ ಸಂಘದ ನಡುಗೋಡು ಇವರ ಸಹಕಾರದೊಂದಿಗೆ ನಿರ್ಮಾಣಗೊಂಡ ಬಯಲು ರಂಗ ವೇದಿಕೆ ಉದ್ಘಾಟನಾ ಸಮಾರಂಭ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.

Comments

comments

Comments are closed.

Read previous post:
Kinnigoli-06011803
ಅಂಗರಗುಡ್ಡೆ ವಾರ್ಷಿಕೋತ್ಸವ

ಕಿನ್ನಿಗೋಳಿ: ಅಂಗರಗುಡ್ಡೆ ಶ್ರೀ ರಾಮ ಕ್ರಿಕೆಟರ‍್ಸ್ ಹಾಗೂ ಶಾಮಿಯಾನ ಸಯೋಂಜಕರ ಒಕ್ಕೂಟದ ವಾರ್ಷಿಕೋತ್ಸವ ಅಂಗರಗುಡ್ಡೆಯಲ್ಲಿ ಬುಧವಾರ ನಡೆಯಿತು. ಈ ಸಂದರ್ಭ ಹಿರಿಯ ಯಕ್ಷಗಾನ ಹಾಸ್ಯಗಾರ ವಿಜಯಕುಮಾರ್ ಶೆಟ್ಟಿ ಮೊಯಿಲೊಟ್ಟು...

Close