ಪಕ್ಷಿಕೆರೆ ರಿಕ್ಷಾ ಪಾರ್ಕ್ ಉದ್ಘಾಟನೆ

ಕಿನ್ನಿಗೋಳಿ: ರಿಕ್ಷಾಚಾಲಕರು ಕಷ್ಟ ಜೀವಿಗಳು ಅವರ ಅವರ ಜೀವನದ ಭದ್ರತೆಗೋಸ್ಕರ ಸರಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಪಕ್ಷಿಕೆರೆ ಚರ್ಚ್ ಸ್ಟಾಪ್ ರಿಕ್ಷಾ ಪಾರ್ಕ್‌ನಲ್ಲಿ ಐವನ್ ಡಿಸೋಜ ಅವರ ಅನುದಾನದ 2 ಲಕ್ಷ ರೂ ಗಳಲ್ಲಿ ರಿಕ್ಷಾಪಾರ್ಕ್‌ಗೆ ಮೇಲ್ಛಾವಣಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ ಪ್ರತಿ ಹೋಬಳಿಗೆ ಒಂದು ರಿಕ್ಷಾ ಭವನ, ಅರ್ಹ ರಿಕ್ಷಾ ಚಾಲಕರಿಗೆ ಪಿಂಚಣಿ ಯೋಜನೆ ಮಾಡಲಾಗುವುದು ಹಾಗೂ ರಿಕ್ಷಾ ಸಹಕಾರಿ ಬ್ಯಾಂಕ್ ಮೂಲಕ ಹೊಸ ರಿಕ್ಷಾ ಕೊಳ್ಳಲು ಸಾಲ ಯೋಜನೆ ಇದೆ. ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಈಗಾಗಲೇ ೧೫ ಕ್ಕೂ ಮಿಕ್ಕಿ ಪಾರ್ಕ್ ತಗಡು ಚಪ್ಪರ ವ್ಯವಸ್ಥೆ ಆಗಿದೆ ಇನ್ನೂ ಹಲವು ರಿಕ್ಷಾ ಪಾರ್ಕ್ ನಿರ್ಮಾಣ ಮಾಡಲಾಗುವುದು., ಹಾಗೂ ಮಕ್ಕಳಿಗೆ ವಿದ್ಯಾರ್ಥಿವೇತನ ಹಾಗೂ ಸ್ವಸಹಾಯ ಸಂಘ ರಚನೆ ಮಾಡಲಾಗುವುದು. ಅಶಕ್ತ ಅನಾರೋಗ್ಯದವರಿಗೆ ಈಗಾಗಲೇ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಸುಮಾರು ೬ ಕೋಟಿ ಹಣ ಮಂಜೂರು ಆಗಿದೆ. ಮುಂದಿನ ದಿನಗಳಲ್ಲಿ ರಿಕ್ಷಾ ಪಾರ್ಕ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಹೈಮಾಸ್ಟ್ ದೀಪ ಹಾಕಲಾಗುವುದು ಎಂದು ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಕಾಂಗ್ರೆಸ್ ಮುಖಂಡ ಗುರುರಾಜ ಎಸ್ ಪೂಜಾರಿ, ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ರಿಚಾರ್ಡ್ ಡಿಸೋಜ, ಪಕ್ಷಿಕೆರೆ ಅತ್ತೂರು ಕಾಪಿಕಾಡು ಕೋರ‍್ದಬ್ಬು ದೈವಸ್ಥಾನದ ಶೀನ ಸ್ವಾಮಿ, ಶ್ಯಾಮರಾಯ ಶೆಟ್ಟಿ ಗೋಳಿದಡಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಕಾಂಗ್ರೆಸ್ ಮುಖಂಡ ಗುಲಾಂ ಮೊಹಮ್ಮದ್, ರಿಕ್ಷಾಚಾಲಕ ಮಾಲಕರ ಸಂಘದ ಅಧ್ಯಕ್ಷ ನಾರಾಯಣ, ಕರಾವಳಿ ಪ್ರಾಧಿಕಾರದ ಸದಸ್ಯ ಸಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06011802

 

Comments

comments

Comments are closed.

Read previous post:
Kinnigoli-06011801
ಕೆಮ್ರಾಲ್ ಶಾಲಾ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಊರಿನ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿಲ್ಲ ಸರಕಾರ ಜನರ ಸೇವೆ ಮಾಡಲು ಅವಕಾಶ ನೀಡಿದೆ ಆದುದರಿಂದ ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಮುಖ್ಯ...

Close