ಸಮಾಜಮುಖಿ ಚಿಂತನೆ 

ಕಿನ್ನಿಗೋಳಿ: ಪುನರೂರು ಪ್ರತಿಷ್ಠಾನವು ಸಮಾಜ ಸೇವಾ ಕಾರ್ಯದ ಮೂಲಕ ಕಳೆದ ಒಂದು ವರ್ಷದಿಂದ ಯುವಜನರನ್ನು ಸಂಘಟಿಸಿಕೊಂಡು ಗ್ರಾಮೀಣ ಭಾಗದಲ್ಲಿನ ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿ ಸಮಾಜಮುಖಿ ಚಿಂತನೆ ಯುವ ಮನಸ್ಸಿನಲ್ಲಿ ಬೆಳಸಲು ಪ್ರಯತ್ನಿಸುತ್ತಿದೆ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಪುನರೂರು ಪ್ರತಿಷ್ಠಾನದ ಸಹೋದರ ಸಂಸ್ಥೆಯಾದ ಮೂಲ್ಕಿ ಜನವಿಕಾಸ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ಯುವಜನರಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಇದೆ. ಸೂಕ್ತವಾದ ಸಮಯದಲ್ಲಿ ಉಪಯುಕ್ತ ಮಾರ್ಗದರ್ಶನ ನೀಡಿದಲ್ಲಿ ಮಾತ್ರ ಯುವಜನರು ಸನ್ಮಾರ್ಗದಲ್ಲಿ ನಡೆಯುತ್ತಾರೆ ಎಂದರು.
ಪಟೇಲ್ ವಾಸುದೇವ ರಾವ್ ಪುನರೂರು ಶುಭ ಹಾರೈಸಿದರು. ನೂತನ ಅಧ್ಯಕ್ಷರಾದ ಗೀತಾ ಶೆಟ್ಟಿ ಅವರ ತಂಡಕ್ಕೆ ಅಧಿಕಾರವನ್ನು ಹಸ್ತಾಂತರಿಸಲಾಯಿತು.
ಪುನರೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿಯ ಉಪಾಧ್ಯಕ್ಷೆ ಭಾಗ್ಯ ರಾಜೇಶ್, ಜೊತೆ ಕಾರ್ಯದರ್ಶಿ ಪ್ರಶಾಂತಿ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪಿ. ಎಸ್. ಸುರೇಶ್ ರಾವ್, ಆನಂದ ಮೇಲಾಂಟ, ಶೋಭಾ ರಾವ್, ದಾಮೋದರ ಶೆಟ್ಟಿ, ಜೀವನ್ ಶೆಟ್ಟಿ, ಶಶಿಕರ ಕೆರೆಕಾಡು ಉಪಸ್ಥಿತರಿದ್ದರು.
ಪ್ರಾಣೇಶ್ ಭಟ್ ದೇಂದಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಭಟ್ ವಂದಿಸಿದರು.

Kinnigoli-08011804

Comments

comments

Comments are closed.

Read previous post:
Kinnigoli-08011803
ಕಲಾವಿದರಿಗೆ ಪುನಶ್ಚೇತನ ಶಿಬಿರ

ಕಿನ್ನಿಗೋಳಿ: ಕಲೆಯ ಬಗ್ಗೆ ಆಸಕ್ತಿ ಹಾಗೂ ಅಧ್ಯಯನ ಶೀಲತೆ ಕಲಾವಿದರಿಗೆ ಇರಬೇಕು. ಅನುಕರಣೆ ಮಾಡದೆ ಸೃಜನ ಶೀಲತೆಯನ್ನು ಬೆಳಸಿದಾಗ ಕಲಾವಿದ ಹಾಗೂ ಕಲೆಯು ಬೆಳಯಬಲ್ಲದು ಎಂದು ಕಟೀಲು ದೇವಳ...

Close