ಕಲಾವಿದರಿಗೆ ಪುನಶ್ಚೇತನ ಶಿಬಿರ

ಕಿನ್ನಿಗೋಳಿ: ಕಲೆಯ ಬಗ್ಗೆ ಆಸಕ್ತಿ ಹಾಗೂ ಅಧ್ಯಯನ ಶೀಲತೆ ಕಲಾವಿದರಿಗೆ ಇರಬೇಕು. ಅನುಕರಣೆ ಮಾಡದೆ ಸೃಜನ ಶೀಲತೆಯನ್ನು ಬೆಳಸಿದಾಗ ಕಲಾವಿದ ಹಾಗೂ ಕಲೆಯು ಬೆಳಯಬಲ್ಲದು ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ನೇತೃತ್ವದಲ್ಲಿ ವಿಜಯ ಕಲಾವಿದರು ಸಹಭಾಗಿತ್ವದಲ್ಲಿ ಭಾನುವಾರ ನಡೆದ ರಂಗ ಚೇತನ ರಂಗ ಕಲಾವಿದರಿಗಾಗಿ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಾಸುಮ ಕೊಡಗು ರಂಗ ತರಬೇತಿ ನೀಡಿ ಮಾತನಾಡಿ ಕಲಾವಿದರು ಕಲೆಯನ್ನು ಆರಾಧಿಸಬೇಕು, ಕಲಿಯಬೇಕೆಂಬ ಹಂಬಲವಿದ್ದಲ್ಲಿ ಕಲೆಗಾರಿಕೆ ಉತ್ಕಷ್ಟ ಮಟ್ಟದ್ದಾಗಿರುತ್ತದೆ ಎಂದರು.
ಐಕಳ ಪೊಂಪೈ ಕಲೇಜು ಪ್ರಿನ್ಸಿಪಾಲ್ ಡಾ. ಜಾನ್ ಕ್ಲಾರೆನ್ಸ್ ಮಿರಾಂದಾ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು. ಉದ್ಯಮಿ ಪೃಥ್ವಿರಾಜ ಆಚಾರ್ಯ, ತೋಕೂರು ತಪೋವನ ಐ. ಟಿ. ಐ. ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್, ವಿಜಯ ಕಲಾವಿದರು ಸಂಚಾಲಕ ನಾಯಿನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು, ಐಕಳ ಪೊಂಪೈ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಕಿನ್ನಿಗೋಳಿ ವಿಜಯ ಕಲಾವಿದರು ಸದಸ್ಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

Kinnigoli-08011803

Comments

comments

Comments are closed.

Read previous post:
Kinnigoli-08011802
ಕಟೀಲು ಅಂತರ್ ಜಿಲ್ಲಾ ಮಟ್ಟ ಪ್ರೋಕಬಡ್ಡಿ ಪಂದ್ಯಾಟ

ಕಿನ್ನಿಗೋಳಿ: ಕಬಡ್ಡಿ ಯಂತಹ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಮಾನಸಿಕ ಸ್ಥೈರ್ಯ, ದೃಡತೆ ಉತ್ತಮಗೊಳ್ಳುವುದು ಎಂದು ಭಾರತೀಯ ಕಬಡ್ಡಿ ತಂಡದ ಮಾಜಿ ಕಪ್ತಾನ ಜಯ ಎ. ಶೆಟ್ಟಿ ಹೇಳಿದರು. ಕಟೀಲು...

Close