ಐಕಳ ಕಂಬಳ ಪೂರ್ವಭಾವಿ ಕುದಿ ಕಂಬಳ

ಕಿನ್ನಿಗೋಳಿ: ಕಂಬಳ ಕ್ರೀಡೆ ತುಳು ನಾಡಿನ ಸಂಸ್ಕೃತಿಯ ಪ್ರತೀಕ. ಐತಿಹಾಸಿಕ ಧಾರ್ಮಿಕ ಹಿನ್ನಲೆಯುಳ್ಳ ಕಾಂತಾಬಾರೆ- ಬೂದಾಬಾರೆ ಸಾಂಪ್ರದಾಯಿಕ ರೀತಿಯಲ್ಲಿ ಅಹಿಂಸ್ಮಾತಕವಾಗಿ ನಡೆಯುತ್ತಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಐಕಳ ಕಂಬಳ ಗದ್ದೆ ವಠಾರದಲ್ಲಿ ತುಳುನಾಡಿ ಐಕಳಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳದ ಪೂರ್ವಾಭಾವಿಯಾಗಿ ಕುದಿ ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವರ ಕಂಬಳವೆಂದು ನಂಬಿಕೆಯ ಸಂಪ್ರದಾಯದಂತೆ ಗದ್ದೆಗೆ ಪೂಜೆ ಸಲ್ಲಿಸಿದ ಬಳಿಕ ಕಂಬಳದ ಕೋಣಗಳನ್ನು ಗದ್ದೆಗೆ ಇಳಿಸಿಲಾಯಿತು.
ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಕಾರ್ಯಧ್ಯಕ್ಷ ಚಿತ್ತರಂಜನ ಭಂಡಾರಿ ಐಕಳಬಾವ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ ಹಿರಿಮನೆ, ಉಪಾಧ್ಯಕ್ಷ ವೈ. ಯೋಗೀಶ್ ರಾವ್, ಲೀಲಾಧರ ಶೆಟ್ಟಿ, ಸ್ವರಾಜ್ ಶೆಟ್ಟಿ, ಗುಲಾಂ ಮಹಮ್ಮದ್, ವಿಶ್ವಾಸ್ ಅಮೀನ್, ಸದಾನಂದ ಕುಂದರ್, ಆನಂದ ಗೌಡ, ಶ್ರೀಶ ಸರಾಫ್ ಐಕಳ, ಸುರೇಶ್ ಎಮ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಹರೀಶ್ ಶೆಟ್ಟಿ ತಾಮಣಿಗುತ್ತು, ಸುರೇಶ್ ಎಮ್ ಕೋಟ್ಯಾನ್ ಪಟ್ಟೆ, ಚೇತನ್ ಪೂಜಾರಿ, ಕೇಶವ ಶೆಟ್ಟಿ, ಯತಿರಾಜ ರೈ, ಸುರೇಂದ್ರ ಶೆಟ್ಟಿ ಹೊಸಗದ್ದೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-09011801

Comments

comments

Comments are closed.

Read previous post:
Kinnigoli-08011804
ಸಮಾಜಮುಖಿ ಚಿಂತನೆ 

ಕಿನ್ನಿಗೋಳಿ: ಪುನರೂರು ಪ್ರತಿಷ್ಠಾನವು ಸಮಾಜ ಸೇವಾ ಕಾರ್ಯದ ಮೂಲಕ ಕಳೆದ ಒಂದು ವರ್ಷದಿಂದ ಯುವಜನರನ್ನು ಸಂಘಟಿಸಿಕೊಂಡು ಗ್ರಾಮೀಣ ಭಾಗದಲ್ಲಿನ ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿ ಸಮಾಜಮುಖಿ ಚಿಂತನೆ...

Close