ಮಹಿಳೆಯರ ಹಕ್ಕುಗಳು ಜಾಗೃತಿ ಮೂಡಿಸಬೇಕು

ಕಿನ್ನಿಗೋಳಿ: ಮಹಿಳೆಯರ ಹಕ್ಕುಗಳು ಹಾಗೂ ಶಿಕ್ಷಣ ಜಾಗೃತಿ ಬಗ್ಗೆ ಸೇವಾಸಂಸ್ಥೆಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಜನಪಯೋಗಿ ಕೆಲಸ ಕಾರ್ಯಗಳನ್ನು ಮಾಡಬೇಕು. ಎಂದು ಇನ್ನರ್‌ವೀಲ್ ಜಿಲ್ಲಾ 318ರ ಜಿಲ್ಲಾ ಚಯರ್‌ಮನ್ ಜಯಶ್ರೀ ಹೇಳಿದರು.
ಭಾನುವಾರ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ಗೆ ಅಧಿಕೃತ ಬೇಟಿ ನೀಡಿ ಮಾತನಾಡಿದರು.
ಡೆಂಗ್ಯೂ ಹಾಗೂ ಚಿಕನ್‌ಗುನ್ಯಾ ರೋಗದ ಜಾಗೃತಿ ಬಗ್ಗೆ ಕರಪತ್ರ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಪದ್ಮನೂರು ಶಾಲಾ ಮುಖ್ಯ ಶಿಕ್ಷಕಿ ಗಿರಿಜ ಹಾಗೂ ವಾಸಂತಿ ಅವರನ್ನು ಸೇವೆ ಹಾಗೂ ಸಾಧನೆಯ ನೆಲೆಯಲ್ಲಿ ಸನ್ಮಾನಿಸಲಾಯಿತು.
ಇಬ್ಬರು ಶಾಲಾ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಪದ್ಮನೂರು ಶಾಲೆಗೆ ಕಸದ ಬುಟ್ಟಿ ಹಾಗೂ ಶಾಲಾ ವಾಚನಾಲಯಕ್ಕೆ ಪುಸ್ತಕ ಇಡುವ ರ‍್ಯಾಕ್ ನೀಡಲಾಯಿತು.
ವಿಮಲಾ ತ್ಯಾಗರಾಜ್ ಉಪಸ್ಥಿತರಿದ್ದರು. ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ರಾಧ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ಶಾರಾದಮ್ಮ ವರದಿ ವಾಚಿಸಿದರು. ಸುಧಾ ಉಡುಪ ಪರಿಚಯಿಸಿದರು. ದಿವ್ಯಾ ಅರುಣ್ ಕಾರ್ಯಕ್ರಮ ನಿರೂಪಿಸಿದರು.

Kinnigoli-09011802

Comments

comments

Comments are closed.

Read previous post:
Kinnigoli-09011801
ಐಕಳ ಕಂಬಳ ಪೂರ್ವಭಾವಿ ಕುದಿ ಕಂಬಳ

ಕಿನ್ನಿಗೋಳಿ: ಕಂಬಳ ಕ್ರೀಡೆ ತುಳು ನಾಡಿನ ಸಂಸ್ಕೃತಿಯ ಪ್ರತೀಕ. ಐತಿಹಾಸಿಕ ಧಾರ್ಮಿಕ ಹಿನ್ನಲೆಯುಳ್ಳ ಕಾಂತಾಬಾರೆ- ಬೂದಾಬಾರೆ ಸಾಂಪ್ರದಾಯಿಕ ರೀತಿಯಲ್ಲಿ ಅಹಿಂಸ್ಮಾತಕವಾಗಿ ನಡೆಯುತ್ತಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಐಕಳಬಾವ...

Close