ಜ. 14 ಪಾವಂಜೆ ಮಕರ ಸಂಕ್ರಮಣ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಜನವರಿ 14 ರ ಸೂರ್ಯೋದಯದಿಂದ 15 ರ ಸೂರ್ಯೋದಯದ ವರೆಗೆ ಶ್ರೀ ಶರವಣಭವನಿಗೆ ಮಕರ ಸಂಕ್ರಮಣೋತ್ಸವ ಹಾಗೂ ಪಾವಂಜೆ ಹರಿದಾಸ ಶ್ರೀ ಲಕ್ಷ್ಮಮೀ ನಾರ್ಣಪ್ಪಯ್ಯ ಸ್ಮರಣಾರ್ಥ ಆರಾಧನೋತ್ಸವವು ನಡೆಯಲಿದೆ. ಜನವರಿ 14 ರ ಬೆಳಿಗ್ಗೆ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಮತ್ತು ಪಾವಂಜೆಯ ಚಂದ್ರಮ್ಮ ಸ್ಮಾರಕ ಮಹಿಳಾ ಮಂಡಳಿಯಿಂದ ಭಜನೆ, ವಿದ್ಯಾ ಈಶ್ವರ್ ಚಂದ್ರ ಮತ್ತು ಕು.ತನ್ವಿ ಅವರಿಂದ ಕರ್ನಾಟಕ ಸಂಗೀತ ಕಚೇರಿ, ಮಧ್ಯಾಹ್ನದಿಂದ ಸಂಜೆವರೆಗೆ ವಾಣಿ ಸತೀಶ್ ಎಲ್ಲೂರು, ಸದಾಶಿವ ಆಚಾರ್ಯ ಕಾಸರಗೋಡು, ಶ್ರೀಪತಿ ರಂಗ ಭಟ್ ಮಧೂರು, ಕು.ವಂದನರಾಣಿ, ವಿಜಯವಲ್ಲಿ ಹೆಜಮಾಡಿ, ಸುಮನಾ ಪ್ರಶಾಂತ್ ಪುತ್ತೂರು, ಶ್ರೀಶ ಆರ್ ಪಾವಂಜೆ, ಅಡೂರು ಸಹೋದರರಿಂದ ಕರ್ನಾಟಕ ಸಂಗೀತ ಕಚೇರಿ, ಸಂಜೆ ಭಗವಾನ್ ದಾಸ್ ಬಪ್ಪನಾಡು ಮತ್ತು ರಾಮ್ ಗಣೇಶ್ ರಿಂದ ಭಕ್ತಿ ಸಂಗೀತ, ರಾತ್ರಿಯಿಂದ ಬೆಳಗ್ಗಿನವರೆಗೆ ವಿಶ್ವಕರ್ಮ ಭಜನಾ ಮಂಡಳಿ ಹಳೆಯಂಗಡಿ, ವೆಂಕಟರಮಣ ಭಜನಾ ಮಂಡಳಿ ಕಾರ್ಕಳ, ವಿಠೋಭ ಭಜನಾ ಮಂಡಳಿ ಹಳೆಯಂಗಡಿ, ದುರ್ಗಾಪ್ರಸಾದ ಭಜನಾ ಸಂಘ ಕೊಲ್ನಾಡು ಹಾಗೂ ಪೊಳಲಿ ಜಗದೀಶದಾಸರು ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-10011804
ಸುಬ್ರಹ್ಮಣ್ಯ ಸ್ಪೋರ್ಟ್ ಕ್ಲಬ್‌ಗೆ ಜಿಲ್ಲಾ ಪ್ರಶಸ್ತಿ

ಕಿನ್ನಿಗೋಳಿ: ಸಾಮಾಜಿಕ, ಶೈಕ್ಷಣಿಕ, ಆರೋಗ್ಯಕರ, ಕ್ರೀಡಾ ಸಂಬಂಧಿತ ಕಾರ್ಯಕ್ರಮಗಳನ್ನು ಪರಿಗಣಿಸಿ ಪ್ರಸ್ತುತ 2017ನೇ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ಗೆ ಪುತ್ತೂರಿನಲ್ಲಿ...

Close