ಕೆಮ್ರಾಲ್ ಹಕ್ಕು ಪತ್ರ ವಿತರಣೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಬಡ ವರ್ಗದ ಅರ್ಹರಿಗೆ ಮೂಲಭೂತ ಸೌಕರ್ಯಗಳಾದ ವಸತಿ, ಕುಡಿಯುವ ನೀರು, ಪಡಿತರ ಚೀಟಿ ಹಾಗೂ ವಿದ್ಯುತ್ ಸೌಲಭ್ಯ ಅಗತ್ಯವಾಗಿದ್ದು ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 94 ಸಿ. ಸಿ ಅನ್ವಯ 96 ಮಂದಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿ ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿದ್ದ ಬಡ ವರ್ಗಕ್ಕೆ ಮನೆ ಕಟ್ಟಲು ಹಾಗೂ ಇತರ ಸೌಲಭ್ಯಗಳು ತಾಂತ್ರಿಕ ಸಮಸ್ಯೆಯಾಗಿದ್ದು ಈ 94 ಸಿಸಿ ಯೋಜನೆಯಿಂದ ಹಕ್ಕು ಪತ್ರ ಲಭಿಸಿ ನೆಮ್ಮದಿಯ ಬದುಕು ಕಾಣುವಂತಾಗಿದೆ, ಗ್ರಾಮ ಪಂಚಾಯಿತಿ ಸದಸ್ಯರು ಜನಪ್ರತಿನಿಧಿಗಳು ಪಕ್ಷಬೇಧ ಮರೆತು ವಾರ್ಡ್‌ನ ಪ್ರತಿ ಮನೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು ಹಾಗಾದಾಗ ಗ್ರಾಮದ ಪೂರ್ಣ ಅಭಿವೃದ್ಧಿ ಸಾಧ್ಯ ಇದು ಸಿದ್ದರಾಮಯ್ಯ ಸರಕಾರದ ಆಶಯವಾಗಿದೆ. ಅರ್ಹ ಬಡವರಿಗೆ ಸರಕಾರದ ಆಶ್ರಯ ಯೋಜನೆಯಡಿ ಮನೆ ಕಟ್ಟಲು 1.20 ಲಕ್ಷ ರೂ ಗಳನ್ನು ನೀಡಲಾಗುವುದು ಎಂದು ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾ. ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಯ್ಯದ್ದಿ, ಸುಧಾಕರ ಶೆಟ್ಟಿ, ಸೇಸಪ್ಪ ಸಾಲ್ಯಾನ್, ಸುರೇಶ್ ದೇವಾಡಿಗ ಪಂಜ, ಹರಿಪ್ರಸಾದ್, ರೇವತಿ ಶೆಟ್ಟಿಗಾರ್, ಮಮತಾ, ಪ್ರಮೀಳಾ, ಸುಮಲತ, ಸುಮತಿ, ಆಶಾಲತಾ, ಮಾಲತಿ, ಲೋಹಿತ್ ಉಪಸ್ಥಿತರಿದ್ದರು.
ಮೂಲ್ಕಿ ವಿಶೇಷ ತಹಶೀಲ್ದಾರ್ ಎಲ್. ಮಾಣಿಕ್ಯ ಪ್ರಸ್ತಾವನೆಗೈದರು. ಪಿಡಿಒ ರಮೇಶ್ ರಾಥೋಡ್ ಸ್ವಾಗತಿಸಿದರು. ಕೆಮ್ರಾಲ್ ಗ್ರಾಮ ಕರಣಿಕ ಸಂತೋಷ್ ಹಕ್ಕುಪತ್ರ ವಿವರ ನೀಡಿ ಕಾರ್ಯಕ್ರಮ ನಿರೂಪಿಸಿದರು.

ಕೆಮ್ರಾಲ್ ಹಾಗೂ ಸಮೀಪದ ಗ್ರಾಮಗಳನ್ನು ಸೇರಿಸಿ ಪಂಜದಲ್ಲಿ ನಂದಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು.
ಶೀಘ್ರದಲ್ಲಿ ಮೂಲ್ಕಿ ತಾಲೂಕು
ಮೂಲ್ಕಿ ತಹಶಿಲ್ದಾರ್ ಕಚೇರಿಗೆ 1.40 ಎಕರೆ ಜಾಗ ಕಾದಿರಿಸಲಾಗಿದೆ ಮುಂದಿನ ದಿನಗಳಲ್ಲಿ ಮೂಲ್ಕಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗುವುದು . ಜಿಲ್ಲೆಯಲ್ಲಿ ಯಾವ ವಿಧಾನ ಸಭಾ ಕ್ಷೇತ್ರಕ್ಕೆ ಸಿಗದ ಎರಡು ವಿಶೇಷ ತಹಶೀಲ್ದಾರರು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿದೆ. 

Kinnigoli-10011803

Comments

comments

Comments are closed.

Read previous post:
Kinnigoli-10011802
ಯುವಜನೋತ್ಸವ ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ: ವಿದ್ಯಾರ್ಥಿಗಳು ಯಾವುದೇ ಚಟಗಳಿಗೆ ದಾಸರಾಗದೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತುಕೊಟ್ಟು ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಪತ್ರಕರ್ತ ರಘುನಾಥ್ ಕಾಮತ್ ಹೇಳಿದರು. ಶನಿವಾರ ಐಕಳ ಪೊಂಪೈ ಕಾಲೇಜು...

Close