ಯುವಜನೋತ್ಸವ ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ: ವಿದ್ಯಾರ್ಥಿಗಳು ಯಾವುದೇ ಚಟಗಳಿಗೆ ದಾಸರಾಗದೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತುಕೊಟ್ಟು ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಪತ್ರಕರ್ತ ರಘುನಾಥ್ ಕಾಮತ್ ಹೇಳಿದರು.
ಶನಿವಾರ ಐಕಳ ಪೊಂಪೈ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಎರಡು ವಾರಗಳ ಯುವಜನೋತ್ಸವ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಎರಡು ವಾರಗಳ ಯುವಜನೋತ್ಸವ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಸ್ವಯಂಸೇವಕರಿಗೆ ಮತ್ತು ಇತರ ವಿದ್ಯಾರ್ಥಿಗಳಿಗಾಗಿ ಭಾಷಣ, ಪ್ರಹಸನ, ಚಿತ್ರಕಲೆ, ಸಮೂಹ ಗಾಯನ, ಕೊಲ್ಯಾಜ್ ಮುಂತಾದ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು.
ನ್ಯಾಕ್ ಸಂಘಟಕ ಯೋಗೀಂದ್ರ ಬಿ. ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಶಕ್ತಿ ದೇಶದ ಆಸ್ತಿ. ಈ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದ್ದಲ್ಲಿ ದೇಶದ ಅಭಿವೃದ್ದಿ ಸಾಧ್ಯ ಎಂದರು.
ಎನ್.ಎನ್.ಎಸ್. ಸಹಯೋಜನಾಧಿಕಾರಿ ಸಿಲ್ವಿಯ ಪಾಯಸ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಕಾರ್ಯಕ್ರಮಾಧಿಕಾರಿ ಡಾ. ವಿಕ್ಟರ್ ವಾಜ್ ಇ. ಸ್ವಾಗತಿಸಿದರು. ಘಟಕದ ನಾಯಕ ವಿಶಾಲ್ ವಂದಿಸಿದರು.

Kinnigoli-10011802

Comments

comments

Comments are closed.

Read previous post:
Kinnigoli-10011801
ಸ್ವಾಮೀ ವಿವೇಕಾನಂದ ಜಯಂತಿ ಕಾರ್ಯಕ್ರಮ

ಕಿನ್ನಿಗೋಳಿ: ಸ್ವಾಮೀ ವಿವೇಕಾನಂದರ ಧನಾತ್ಮಕ ಚಿಂತನೆ ಹಾಗೂ ನಮ್ಮ ದೇಶದ ಸೈನಿಕರ ಬದುಕಿನ ಚಿಂತನೆ ಆದರ್ಶ ಸೇವಾ ಮನೋಭಾವನೆಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಸುದೃಡ ದೇಶವನ್ನು ಕಟ್ಟಬಹುದು ಎಂದು...

Close