ಸ್ವಾಮೀ ವಿವೇಕಾನಂದ ಜಯಂತಿ ಕಾರ್ಯಕ್ರಮ

ಕಿನ್ನಿಗೋಳಿ: ಸ್ವಾಮೀ ವಿವೇಕಾನಂದರ ಧನಾತ್ಮಕ ಚಿಂತನೆ ಹಾಗೂ ನಮ್ಮ ದೇಶದ ಸೈನಿಕರ ಬದುಕಿನ ಚಿಂತನೆ ಆದರ್ಶ ಸೇವಾ ಮನೋಭಾವನೆಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಸುದೃಡ ದೇಶವನ್ನು ಕಟ್ಟಬಹುದು ಎಂದು ಖ್ಯಾತ ಅಂಕಣಕಾರ ಆದರ್ಶ ಗೋಖಲೆ ಹೇಳಿದರು.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜಿನಲ್ಲಿ ಪುನರೂರು ಪ್ರತಿಷ್ಠಾನ (ರಿ) ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಸೋಮವಾರ ನಡೆದ ವಿವೇಕಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಮನಸ್ಸು ಕಂಪ್ಯೂಟರ್ ಇದ್ದಂತೆ ವಿವೇಕಾನಂದ ಸಾರದ ಆಂಟಿ ವೈರಸ್ಸನ್ನು ನಮ್ಮ ಮನಸ್ಸಿನಲ್ಲಿ ಅಳವಡಿಸಿಕೊಂಡಾಗ ನಾವು ಮಾನಸಿಕವಾಗಿ ಬಲಿಷ್ಠರಾಗುತ್ತೇವೆ ಎಂದರು.
ಕಟೀಲು ದೇವಳದ ಅನುವಂಶಿಕ ಅರ್ಚಕ ಗೋಪಾಲಕೃಷ್ಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿವೇಕನಾಂದರ ತತ್ವ ಆದರ್ಶಗಳನ್ನು ನಾವು ಪಾಲಿಸಬೇಕು ಎಂದರು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಂ ಬಾಲಕೃಷ್ಣ ಶೆಟ್ಟಿ, ಉದ್ಯಮಿ ಹಳೆಯಂಗಡಿ ಪೂಜಾ ಎರೇಂಜರ‍್ಸ್ ನ ಜಯಕೃಷ್ಣ ಬಿ ಕೋಟ್ಯಾನ್, ಉದ್ಯಮಿ ನವೀನ್ ಶೆಟ್ಟಿ ಏಳಿಂಜೆ, ಅನಿಲ್ ಕುಮಾರ್ ಮೂಲ್ಕಿ, ಜನವಿಕಾಸ ಸಮಿತಿಯ ಅಧ್ಯಕ್ಷೆ ಗೀತಾ ಕೆ. ಶೆಟ್ಟಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಸುಚಿತ್ರಾ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-10011801

Comments

comments

Comments are closed.