ಸುಬ್ರಹ್ಮಣ್ಯ ಸ್ಪೋರ್ಟ್ ಕ್ಲಬ್‌ಗೆ ಜಿಲ್ಲಾ ಪ್ರಶಸ್ತಿ

ಕಿನ್ನಿಗೋಳಿ: ಸಾಮಾಜಿಕ, ಶೈಕ್ಷಣಿಕ, ಆರೋಗ್ಯಕರ, ಕ್ರೀಡಾ ಸಂಬಂಧಿತ ಕಾರ್ಯಕ್ರಮಗಳನ್ನು ಪರಿಗಣಿಸಿ ಪ್ರಸ್ತುತ 2017ನೇ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ಗೆ ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪುತ್ತೂರಿನ ಸವಣೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ಹಾಗೂ ಜಿಲ್ಲಾ ಯುವಜನ ಮೇಳ ಸಂಘಟನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಯುವಜನ ಮೇಳದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್‌ದಾಸ್‌ರನ್ನು ವಿಶೇಷವಾಗಿ ಸಮ್ಮಾನಿಸಿ ಪ್ರಶಸ್ತಿಯನ್ನು ನೀಡಲಾಯಿತು. ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಪುತ್ತೂರು ಎ.ಪಿ.ಎಂ.ಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ಸತೀಶ್‌ಕುಮಾರ್ ಕೆಡೆಂಜೆ, ಅರುಣ್‌ಕುಮಾರ್ ಪುತ್ತಿಲ, ಡಾ.ರಘುನಂದನ್ ಮೂರ್ತಿ, ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷ ರಾಜೀವ ಸಾಲಿಯಾನ್, ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪ್ರಧಾನ ಕಾರ್ಯದರ್ಶಿ ಗಿರೀಶ್ ಶೆಟ್ಟಿ ಶಿಬರೂರು, ನಿರ್ದೇಶಕ ರಾಕೇಶ್ ರೈ ಕೆಡೆಂಜೆ, ತಾಲೂಕು ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕರಂಬಾರು, ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿಗಳಾದ ಮಾಮಚ್ಚನ್ ಎಂ., ದೇವರಾಜ್ ಮುತ್ಲಾಜೆ, ಲಿಲ್ಲಿ ಪಾಯಸ್, ನವೀನ್, ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ತೋಕೂರು ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್‌ಕುಮಾರ್ ಬೇಕಲ್, ಪದಾಧಿಕಾರಿಗಳಾದ ಯೋಗೀಶ್ ಕೋಟ್ಯಾನ್, ಸುರೇಶ್ ಶೆಟ್ಟಿ, ಗಣೇಶ್ ಅಮೀನ್, ಸಂತೋಷ್ ಕುಮಾರ್, ಸಂಪತ್‌ಕುಮಾರ್, ದೀಪಕ್ ಸುವರ್ಣ ಉಪಸ್ಥಿತರಿದ್ದರು.

Kinnigoli-10011804

Comments

comments

Comments are closed.

Read previous post:
Kinnigoli-10011803
ಕೆಮ್ರಾಲ್ ಹಕ್ಕು ಪತ್ರ ವಿತರಣೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಬಡ ವರ್ಗದ ಅರ್ಹರಿಗೆ ಮೂಲಭೂತ ಸೌಕರ್ಯಗಳಾದ ವಸತಿ, ಕುಡಿಯುವ ನೀರು, ಪಡಿತರ ಚೀಟಿ ಹಾಗೂ ವಿದ್ಯುತ್ ಸೌಲಭ್ಯ ಅಗತ್ಯವಾಗಿದ್ದು ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

Close