ಜ. 14 : ಉಳೆಪಾಡಿ ಮಕರ ಸಂಕ್ರಮಣ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಜನವರಿ 14 ಭಾನುವಾರ ಮಕರ ಸಂಕ್ರಮಣ-ಮಹಾ ಪೂಜೆ ಜರುಗಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ ಬಳ್ಕುಂಜೆ ಅಧ್ಯಕ್ಷತೆ ವಹಿಸಲಿದ್ದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಅಭಿನಂದನಾ ಭಾಷಣಗ್ಯೆಯಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ದ್ಯೆವದ ಸೇವೆ ಮಾಡುವ ನಾರಾಯಣ ಅಂಚನ್ ತಾಳಿಪಾಡಿ, ಶಂಭು ಮುಕ್ಕಾಲ್ದಿ ಕೆಮ್ರಾಲ್, ಉಮೇಶ್ ಬಂಗೇರ ಐಕಳ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಉಮೇಶ್ ಶೆಟ್ಟಿ ಮಚ್ಚಾರ್ ಗುತ್ತು ನಿಡ್ಡೋಡಿ, ಮುಲ್ಕಿ ಆರಕ್ಷಕ ಠಾಣೆಯ ಉಪನಿರೀಕ್ಷಕ ಶೀತಲ್ ಅಲಗೂರು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಿದ್ದಾರೆ. ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ ಭುವನಾಭಿರಾಮ ಉಡುಪ, ಸುಧಾಕರ ಆಳ್ವ ಮಂಗಳೂರು, ಪ್ರವೀಣ್ ಪೂಜಾರಿ ಕೊಲ್ಲೂರು, ಸುಧಾಕರ ಸಾಲ್ಯಾನ್ ಮುಂಡ್ಕೂರು ಉಪಸ್ಥಿತಲಿದ್ದಾರೆ. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಳದ ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-12011803
ಕಟೀಲು ಎಪಿಎಂಸಿ ಕಟ್ಟಡಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಬೇಕು. ಎಪಿಎಂಸಿಯ ಅನುದಾನದಿಂದ ಕಟೀಲು ಮಾಂಜದಲ್ಲಿ 35 ಲಕ್ಷ ರೂ ವೆಚ್ಚದಲ್ಲಿ ಕೃಷಿ ಉತ್ಪನ್ನ...

Close