ಕಾರ್ನಾಡು – 38ನೇ ವಾರ್ಷಿಕೋತ್ಸವ

ಮೂಲ್ಕಿ: ಯುವ ಸಮಾಜ ದುಶ್ಚಟಗಳಿಂದ ದೂರವಿದ್ದು ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಸದೃಡರಾಗಿ ಶಿಕ್ಷಣ ಗಳಿಕೆಯ ಮೂಲಕ ಸ್ವಾವಲಂಭಿಗಳಾಗಿ ಪ್ರಾದೇಶಿಕ ಉನ್ನತಿಗೆ ಸಹಕಾರ ನೀಡಬೇಕು ಎಂದು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಜಿತ್ ಕುಮಾರ್ ಶೆಟ್ಟಿ ಹೇಳಿದರು.
ಕಾರ್ನಾಡು ಯಂಗ್ ಸ್ಟಾರ‍್ಸ್ ಎಸೋಸಿಯೇಶನ್ 38ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಾಧಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದುಶ್ಚಟಗಳಿಂದ ಯುವ ಸಮಾಜ ಕರ್ತವ್ಯ ವಿಮುಖರಾಗುವುದು ಮಾತ್ರವಲ್ಲದೆ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರಿ ಅವರ ಉನ್ನತ ಭವಿಷ್ಯ ಹಾಳಾಗುತ್ತದೆ. ಸಮಾಜ ಸೇವಾ ಸಂಸ್ಥೆಗಳು ಯುವ ಜನರಿಗೆ ಈ ಬಗ್ಗೆ ಜಾಗ್ರತಿ ಮೂಡಿಸಬೇಕು ಕಳೆದ ೩೮ವರ್ಷಗಳಿಂದ ಯುವ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ ಯಂಗ್ ಸ್ಟಾರ‍್ಸ್ ಸಂಸ್ಥೆ ಇನ್ನೂ ಉನ್ನತ ಹಂತಕ್ಕೇರಲು ಯುವ ಜನತೆ ಸಹಾಯ ಮಾಡಬೇಕು ಎಂದರು.
ಈ ಸಂದರ್ಭ ಅತಿಥಿಯಾಗಿದ್ದ ಅಮೇರಿಕನ್ ನೇವಿ ಪ್ರಶಸ್ತಿ ವಿಜೇತ ಅಧಿಕಾರಿ ಅನಿಟಾ ಸೋನ್ಸ್ ಮಾತನಾಡಿ, ಪ್ರಾಮಾಣಿಕ ವ್ಯಕ್ತಿತ್ವ ಹಾಗೂ ಕರ್ತವ್ಯಪರತೆ ನಮ್ಮನ್ನು ಉನ್ನತ ಸ್ಥಾನಕ್ಕೇರಲು ಸಹಾಯ ಮಾಡುತ್ತದೆ. ಗ್ರಾಮೀಣ ಕ್ರಷಿ ಕುಟುಂಬದಲ್ಲಿ ಜನಿಸಿ ಮೂಲ್ಕಿಯಲ್ಲಿ ಪ್ರಾಥಮಿಕ ಹಾಗೂ ಪದವಿ ವ್ಯಾಸಂಗ ಮುಗಿಸಿ ಪರದೇಶಕ್ಕೆ ತೆರಳಿದಬಳಿಕ ಸ್ವಂತ ಪರಿಶ್ರಮದಿಂದ ನಡೆಸಿದ ದುಡಿಮೆ ನನ್ನನ್ನು ಉನ್ನತ ಹಂತಕ್ಕೇರಿಸಿದ್ದು ಯುವ ಸಮಾಜ ಪ್ರಾಮಾಣಿಕತೆಯಿಂದ ಮುಂದುವರಿಯಬೇಕು ಎಂದರು.
ಈ ಸಂದರ್ಭ ಕರಾಟೆ ಮತ್ತು ಜೂಡೋ ಅಂತರಾಷ್ಟ್ರೀಯ ಸ್ಪರ್ದೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ವಿಜೇತರಾದ ಹಿಮಾಂಶು ಹೆಗ್ಡೆ ಮತ್ತು ಅಕ್ಷಯ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವ ಸಂದರ್ಭ ನಡೆಸಲಾದ ಸ್ಪರ್ದೆಗಳ ಬಹುಮಾನ ನೀಡಲಾಯಿತು. ಯಂಗ್ ಸ್ಟಾರ‍್ಸ್ ಅಧ್ಯಕ್ಷ ಗುರುರಾಜ್,ಕಾರ್ಯದರ್ಶಿ ಸುಹಾನ್, ಕೋಶಾಧಿಕಾರಿ ನೂತನ್ ಉಪಸ್ಥಿತರಿದ್ದರು. ಗುರುರಾಜ್‌ಸ್ವಾಗತಿಸಿದರು.ಸುಹಾನ್ ವರದಿ ಮಂಡಿಸಿದರು, ರಮೇಶ್ ಗುಂಡಾಲು ಕ್ರೀಡಾ ಸಾಧಕರನ್ನು ಪರಿಚಯಿಸಿದರು. ಪ್ರಚನ್ ಚಂದ್ರಶೇಖರ್ ಸನ್ಮಾನಿತರ ಸಾಧನೆ ತಿಳಿಸಿದರು.ಕೃಷ್ಣ ಹೊಳ್ಳ ನಿರೂಪಿಸಿದರು.ಕೀರ್ಥನ್ ವಂದಿಸಿದರು.

Mulki-12011802

Comments

comments

Comments are closed.

Read previous post:
Mulki-12011801
ಉಚಿತ ತಪಾಸಣಾ ಶಿಭಿರ

ಮೂಲ್ಕಿ: ಮೂಲ್ಕಿ ಗೌಡ ಸಾರಸ್ವತ ಬ್ರಾಹ್ಮಣ ಸಭಾ, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ. ಕೆ.ಎಂ.ಸಿ ದಂತ ಮಹಾ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮೂಲ್ಕಿ ಸಭಾಗ್ರಹದಲ್ಲಿ ನಡೆದ...

Close