ಕಟೀಲು ಎಪಿಎಂಸಿ ಕಟ್ಟಡಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಬೇಕು. ಎಪಿಎಂಸಿಯ ಅನುದಾನದಿಂದ ಕಟೀಲು ಮಾಂಜದಲ್ಲಿ 35 ಲಕ್ಷ ರೂ ವೆಚ್ಚದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಗುರುವಾರ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಯಂಗಡಿ ಮಾಂಜದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಎಪಿಎಂಸಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಕಟೀಲು ಪರಿಸರದ ರೈತಪಿ ವರ್ಗದವರು ಕಿನ್ನಿಗೋಳಿ ಅಥವ ಬಜಪೆ ಕೃಷಿ ಮಾರುಕಟ್ಟೆಗಳನ್ನು ಅವಲಂಬಿಸಬೇಕಾಗಿದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿ ಮಾರುಕಟ್ಟೆ ನಿರ್ಮಣಗೊಂಡರೆ ಜನರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಮಯ ಶ್ರಮ ಕಡಿಮೆಯಾಗುವುದು ಎಂದು ಹೇಳಿದರು.
ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾ. ಪಂ ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಜೊಯಲ್ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಜಿ. ಪಂ. ಸದಸ್ಯೆ ಶೈಲಾ ಸಿಕ್ವೇರಾ, ನಿತಿನ್ ಹೆಗ್ಡೆ ಕಾವರ ಮನೆ, ಗುತ್ತಿಗೆದಾರ ಯಾದವ ಕೊಟ್ಯಾನ್ ಪೆರ್ಮುದೆ, ವಿಕ್ರಂ ಮಾಡ, ರಮಾನಂದ ಪೂಜಾರಿ, ಡೋಲ್ಪಿ ಸಂತುಮಾಯೋರ್, ಸುನಿಲ್ ಸಿಕ್ವೇರಾ, ಅನಿತಾ ಅರಾಹ್ನ, ಪ್ರಕಾಶ್ ಆಚಾರ್ಯ, ದಯಾನಂದ ಶೆಟ್ಟಿ, ಇಲಾಖೆಯ ಕಾರ್ಯದರ್ಶಿ ಕುಬೇರ್ ನಾಯಕ್, ಅಶೋಕ್ ಕುಮಾರ್, ಶ್ರೀನಿವಾಸ ಮೂರ್ತಿ, ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಕಿನ್ನಿಗೋಳಿ ಉಲ್ಲಂಜೆ ಕಟೀಲು ರಸ್ತೆಗೆ ಎರಡು ಕೋಟಿ ರೂ ವೆಚ್ಚದಲ್ಲಿ ಎರಡು ಸೇತುವೆ (ಅಗಲೀಕರಣ) ಸಹಿತ ರಸ್ತೆಗೆ ಡಾಮರೀಕರಣ ನಡೆಯಲಿದೆ. ಕೆಲವೊಂದು ಕಡೆಗಳಲ್ಲಿ ದಾನಿಗಳು ಸಹಕಾರ ನೀಡಿದಲ್ಲಿ ರಸ್ತೆ ಅಗಲಗೊಳಿಸುವ ಕೆಲಸ ನಡೆಯಲಿದೆ.
ನರ್ಬಾಡ್‌ನ ನೆರವಿನಿಂದ ಒಂದು ಕೋಟಿ ರೂ ವೆಚ್ಚದಲ್ಲಿ ಕಟೀಲು – ಮಲ್ಲಿಗೆಯಂಗಡಿ – ನಡುಗೋಡು – ಶಿಬರೂರು ಸಂರ್ಪಕಿಸುವ ರಸ್ತೆ ನಿರ್ಮಾಣ ಮಾಡಲಾಗುವುದು.

Kinnigoli-12011803

Comments

comments

Comments are closed.

Read previous post:
Mulki-12011802
ಕಾರ್ನಾಡು – 38ನೇ ವಾರ್ಷಿಕೋತ್ಸವ

ಮೂಲ್ಕಿ: ಯುವ ಸಮಾಜ ದುಶ್ಚಟಗಳಿಂದ ದೂರವಿದ್ದು ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಸದೃಡರಾಗಿ ಶಿಕ್ಷಣ ಗಳಿಕೆಯ ಮೂಲಕ ಸ್ವಾವಲಂಭಿಗಳಾಗಿ ಪ್ರಾದೇಶಿಕ ಉನ್ನತಿಗೆ ಸಹಕಾರ ನೀಡಬೇಕು ಎಂದು ಮೂಲ್ಕಿ ಸಮುದಾಯ...

Close