ಕಟೀಲು ಅಜಾರು ಅಡ್ಡ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಶಾಸಕರ ಅಭಿವೃದ್ಧಿ ಯೋಜನೆ ನಿಧಿಯಿಂದ ಸುಮಾರು ಐದು ಲಕ್ಷ ರೂ. ಅನುದಾನದಲ್ಲಿ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟೀಲು ಕಾಲೇಜು ಬಳಿಯ ಅಜಾರು ಕಾಂಕ್ರಿಟಿಕರಣಗೊಂಡ ಅಡ್ಡ ರಸ್ತೆಯನ್ನು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಗುರುವಾರ ಉದ್ಘಾಟಿಸಿದರು. ಈ ಸಂದರ್ಭ ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಮಂಗಳೂರು ತಾ. ಪಂ. ಸದಸ್ಯ ಸುಕುಮಾರ್ ಸನಿಲ್, ಕಟೀಲು ಚರ್ಚ್ ಧರ್ಮಗುರು ಫಾ. ರೋನಾಲ್ಡ್ ಕುಟಿನ್ಹೊ, ಮಾಜಿ ತಾ. ಪಂ. ಸದಸ್ಯ ತಿಮ್ಮಪ್ಪ ಕೋಟ್ಯಾನ್, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಚಂದ್ರಹಾಸ ಸನಿಲ್, ದ.ಕ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ದ.ಕ ಮಹಿಳಾ ಕಾಂಗ್ರಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ, ಎಪಿಎಂಸಿ ಮಾಜಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ರಮಾನಂದ ಪೂಜಾರಿ, ಜಯಂತಿ, ಪುಷ್ಪಾ, ಡೇನಿಯಲ್, ಸಂಜೀವ ಮಡಿವಾಳ, ಸುನಿಲ್ ಸಿಕ್ವೇರಾ, ನವೀನ್ ಕುಮಾರ್ ಕಟೀಲು, ಗಣೇಶ್ ಆಚಾರ್ಯ, ಪ್ರಕಾಶ್ ಆಚಾರ್ಯ, ಅನಿತಾ ಆರಾನ್ಹ, ಮತ್ತಿತರರು ಉಪಸ್ಥಿತರಿದ್ದರು.

Kinnigoli-13011802

Comments

comments

Comments are closed.

Read previous post:
Kinnigoli-13011801
ಕಟೀಲು ಸ್ವಾಮಿ ವಿವೇಕಾನಂದ ಜಯಂತಿ

ಕಿನ್ನಿಗೋಳಿ : ಸ್ವಾಮಿ ವಿವೇಕಾನಂದರು ಧರ್ಮ ಜಾಗೃತಿಯೊಂದಿಗೆ ಯುವ ಜನರನ್ನು ಸಂಘಟಿಸುವ ಕೆಲಸ ಮಾಡಿದ್ದಾರೆ. ಅವರ ಮೌಲ್ಯಾಧಾರಿತ ಚಿಂತನೆ, ತತ್ವ, ಆದರ್ಶಗಳು ಯುವ ಪೀಳಿಗೆಗೆ ಮಾರ್ಗದರ್ಶಿ ಎಂದು ಜಿಲ್ಲಾ ಪಂಚಾಯಿತಿ...

Close