ಜ.14ರಂದು ಐಕಳೋತ್ಸವ

ಕಿನ್ನಿಗೋಳಿ : ಐಕಳಬಾವ ಕಾಂತಾಬಾರೆ-ಬೂದಾಬಾರೆ ಜೋಡುಕರೆ ಕಂಬಳ ಸಮಿತಿಯ ನೇತೃತ್ವದಲ್ಲಿ ಐಕಳೋತ್ಸವದ ತುಳು ಜಾನಪದ ಕ್ರೀಡಾ ಮೇಳವು ಜ. 14 ರಂದು ಐಕಳದ ಕಾಂತಾಬಾರೆ-ಬೂದಾಬಾರೆ ಜೋಡುಕರೆ ಕಂಬಳದ ಮಂಜೊಟ್ಟಿ ಗದ್ದೆಯಲ್ಲಿ ಜರಗಲಿದೆ. ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿಲಿರುವರು. ಸಂಜೆ ಸಮಾರೋಪ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಮದು ಕಂಬಳ ಸಮಿತಿಯ ಅಧ್ಯಕ್ಷ ಐಕಳ ಬಾವ ಡಾ| ದೇವಿ ಪ್ರಸಾದ್ ಶೆಟ್ಟಿ ತಿಳಿಸಿದರು. ಅವರು ಜ. 12 ರಂದು ಕಂಬಳದ ಕರೆಯಲ್ಲಿ ನಡೆದ ಸುದ್ದಗೋಷ್ಠಿಯಲ್ಲಿ ಮಾತಾನಡಿ ಜ. 27 ರಂದು ಐಕಳ ಕಂಬಳೋತ್ಸವ ನಡೆಯಲಿದೆ ಅದರ ಪೂರ್ವಭಾವಿಯಾಗಿ ಕ್ರೀಡ ಕೂಟ ಅಯೋಜಿಸಿದೆ ಇದರಲ್ಲಿ ತುಳುನಾಡಿನ ವಿವಿಧ ಜಾನಪದ ಕ್ರೀಡೆ, ಸಂಪ್ರದಾಯ ಮತ್ತು ಸಂಸ್ಕ್ರತಿಯನ್ನು ಬಿಂಬಿಸುವ ವಿವಿಧ ಸ್ಪರ್ಧೆಗಳನ್ನು ಗ್ರಾಮೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಎರ್ಪಡಿಸಲಾಗಿದ್ದು ಮುಂಡ್ಕೂರು, ಐಕಳ, ಪಟ್ಟೆ, ಏಳಿಂಜೆ, ಉಳೆಪಾಡಿ, ತಾಳಿಪಾಡಿ ಮತ್ತು ಕೊಟ್ರಪಾಡಿ ಗ್ರಾಮದ ಕುದ್ರಿಪದವು ಪ್ರದೇಶದ ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶವಿದ್ದು ಕೆಸರುಗದ್ದೆ ಓಟ, ಮೂರು ಕಾಲಿನ ಓಟ, ತ್ರೋಬಾಲ್, ಗೋಣಿಚೀಲ ಓಟ, ಮಡಿಕೆ ಒಡೆಯುವುದು, ಗುಂಡುಕಲ್ಲು ಎತ್ತುವುದು, ಜಾನಪದಕ್ಕೆ ಸಂಬಂಧಿಸಿ ಕ್ವಿಜ್, ಸಂಗೀತ ಕುರ್ಚಿ, ತೆಂಗಿನಕಾಯಿ ಕಟ್ಟುವುದು, ಲಿಂಬೆ ಚಮಚ ಓಟ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಸುದ್ದಿಗೋಷ್ಟಿಯಲ್ಲಿ ಕಾರ್ಯಧ್ಯಕ್ಷ ಚಿತ್ತರಂಜನ ಭಂಡಾರಿ ಐಕಳಬಾವ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ ಹಿರಿ ಮೆನೆ, ಸಂಜೀವ ಶೆಟ್ಟಿ ಸ್ಥಳಂತ ಗುತ್ತು, ಐಕಳ ಜಯಪಾಲ ಶೆಟ್ಟಿ , ಸ್ವರಾಜ್ ಶಟ್ಟಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-13011802
ಕಟೀಲು ಅಜಾರು ಅಡ್ಡ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಶಾಸಕರ ಅಭಿವೃದ್ಧಿ ಯೋಜನೆ ನಿಧಿಯಿಂದ ಸುಮಾರು ಐದು ಲಕ್ಷ ರೂ. ಅನುದಾನದಲ್ಲಿ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟೀಲು ಕಾಲೇಜು ಬಳಿಯ ಅಜಾರು ಕಾಂಕ್ರಿಟಿಕರಣಗೊಂಡ ಅಡ್ಡ ರಸ್ತೆಯನ್ನು...

Close