ಜಾನಪದ ಕ್ರೀಡಾ ಕೂಟ ಗ್ರಾಮೀಣ ಜನರ ಒಗ್ಗಟ್ಟು

ಕಿನ್ನಿಗೋಳಿ: ಕೃಷಿ ಕಾಯಕವನ್ನು ಹಿರಿಯರು ಎಷ್ಟು ಕಷ್ಟಪಟ್ಟು ಮಾಡುತ್ತಿ ದ್ದರು ಎಂಬ ಅರಿವು ಯುವ ಜನರಿಗೆ ಆಗಬೇಕು. ಇಂತಹ ಜಾನಪದ ಕ್ರೀಡಾ ಕೂಟ ಆಯೋಜಿಸಿದಾಗ ಗ್ರಾಮೀಣ ಜನರ ಒಗ್ಗಟ್ಟು ಪ್ರದರ್ಶನಗೊಳ್ಳುತ್ತದೆ ಎಂದು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಹೇಳಿದರು.
ಐಕಳ ಬಾವ ಕಾಂತಾಬಾರೆ -ಬೂದಾಬಾರೆ ಜೋಡುಕೆರೆ ಕಂಬಳ ಸಮಿತಿಯ ಆಶ್ರಯದಲ್ಲಿ ಭಾನುವಾರ ನಡೆದ ತುಳು ಜಾನಪದ ಕ್ರೀಡಾ ಮೇಳ ಐಕಳೋತ್ಸವವನ್ನು ಕಂಬಳದ ಮಂಜೊಟ್ಟಿ ಗದ್ದೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಐಕಳ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕ್ರೀಡೆಗಳನ್ನು ಎಲ್ಲರಿಗೂ ತಿಳಿ ಹೇಳುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಮೆನ್ನಬೆಟ್ಟು ಗ್ರ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ, ಪತ್ರಕರ್ತರಾದ ರಘುನಾಥ್ ಕಾಮತ್, ಯಶವಂತ ಐಕಳ, ಕಂಬಳ ಸಮಿತಿ ಸಂಚಾಲಕ ಮುರಳೀಧರ ಶೆಟ್ಟಿ , ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಸಂಜೀವ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ಸಾಯಿನಾಥ ಶೆಟ್ಟಿ ಸ್ವಾಗತಿಸಿದರು. ಕಂಬಳ ಸಮಿತಿಯ ಕಾರ್ಯದ್ಯಕ್ಷ ಚಿತ್ತರಂಜನ್ ಭಂಡಾರಿ ವಂದಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15011802

Comments

comments

Comments are closed.

Read previous post:
Kinnigoli-15011801
ಪದ್ಮನೂರು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಹೆತ್ತವರ ಶಿಕ್ಷಕರ ಪ್ರೋತ್ಸಾಹ ಹಾಗೂ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಗಮನವಿರಿಸುವಂತೆ ನೋಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಗತಿ ಕಂಡುಕೊಳ್ಳುತ್ತಾರೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್...

Close