ಕೆರೆಕಾಡು ಕಾಂಕ್ರೀಟಿಕರಣ ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ: ಕೆರೆಕಾಡು ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಎಸ್.ಟಿ ಕಾಲನಿ ರಸ್ತೆ ಗಣೇಶ್ ಕಾರ್ಣಿಕ್, ದ.ಕ. ಜಿಲ್ಲಾ ಪಂಚಾಯಿತಿ, ಮಂಗಳೂರು ತಾಲೂಕು ಪಂಚಾಯಿತಿ ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಹೇಳಿದರು
ಅವರು ಕೆರೆಕಾಡು ಎಸ್.ಟಿ ಕಾಲನಿಯಲ್ಲಿ ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮೀಣ ಮಟ್ಟದ ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುತ್ತದೆ. ಈ ರಸ್ತೆಗೆ ಮುಂದುವರಿದ ಬಾಗದ ಕಾಂಕ್ರೀಟಿಕರಣಕ್ಕೆ ಸಂಸದ ನಳಿನ್ ಕುಮಾರ್ ಅವರ ಅನುದಾನವೂ ಸಿಗಲಿದೆ ಎಂದರು.
ಗ್ರಾಮಸ್ಥೆ ರತ್ನಾವತಿ ಆಚಾರ್ಯ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದರು . ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಉಪಾಧ್ಯಕ್ಷೆ ಸುರೇಖ, ಪಂಚಾಯತ್ ಸದಸ್ಯ ವಿನೋದ್ ಸಾಲ್ಯಾನ್, ಶ್ವೇತ, ಲಕ್ಷ್ಮಣ್ ಸಾಲ್ಯಾನ್, ಹರ್ಷ, ದಿವ್ಯಶ್ರೀ ದೇವಾಡಿಗ, ರಾಜೇಶ್ ದೇವಾಡಿಗ, ಯೋಗೀಶ್, ಪ್ರವೀಣ್ ಕೋಟ್ಯಾನ್, ಗಣೇಶ್ ದೇವಾಡಿಗ, ಕೃಷ್ಣ ಶೆಟ್ಟಿ, ಸತೀಶ್ ಆಚಾರ್ಯ, ರತ್ನಾ ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.

Kinnigoli-15011803

Comments

comments

Comments are closed.

Read previous post:
Kinnigoli-15011802
ಜಾನಪದ ಕ್ರೀಡಾ ಕೂಟ ಗ್ರಾಮೀಣ ಜನರ ಒಗ್ಗಟ್ಟು

ಕಿನ್ನಿಗೋಳಿ: ಕೃಷಿ ಕಾಯಕವನ್ನು ಹಿರಿಯರು ಎಷ್ಟು ಕಷ್ಟಪಟ್ಟು ಮಾಡುತ್ತಿ ದ್ದರು ಎಂಬ ಅರಿವು ಯುವ ಜನರಿಗೆ ಆಗಬೇಕು. ಇಂತಹ ಜಾನಪದ ಕ್ರೀಡಾ ಕೂಟ ಆಯೋಜಿಸಿದಾಗ ಗ್ರಾಮೀಣ ಜನರ ಒಗ್ಗಟ್ಟು...

Close