ಪದ್ಮನೂರು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಹೆತ್ತವರ ಶಿಕ್ಷಕರ ಪ್ರೋತ್ಸಾಹ ಹಾಗೂ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಗಮನವಿರಿಸುವಂತೆ ನೋಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಗತಿ ಕಂಡುಕೊಳ್ಳುತ್ತಾರೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಅವರು ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಪದ್ಮನೂರು ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಕವಿ ಪ್ರಸಂಗಕರ್ತ ಅರ್ಥಧಾರಿ ಶ್ರೀಧರ್ ಡಿ. ಎಸ್. ಪ್ರಧಾನ ಭಾಷಣಗೈದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಬಹುಮಾನ ವಿತರಿಸಿದರು.
ಚಿತ್ರಕಲೆಯಲ್ಲಿ ಶ್ರಾರ್ವರಿ ತಾಲೂಕು ಮಟ್ಟ, ಲಿಖಿತಾ ಜಿಲ್ಲಾ ಮಟ್ಟ, ರಾಜೇಶ್ ರಾಜ್ಯ ಮಟ್ಟ ಸಾಧನೆಗೈದಿದ್ದು ಅವರನ್ನು ಶಾಲೆ ಹಾಗೂ ಬಯಲಾಟ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಗ್ರಾಮ ಪಂಚಾಯಿತಿ ಸದಸ್ಯರಾದ ದೇವಪ್ರಸಾದ್ ಪುನರೂರು, ಸುಲೋಚನಾ ಶೆಟ್ಟಿಗಾರ್ತಿ, ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ರಾಧಾ ಶೆಣೈ, ಪದ್ಮನೂರು ಬಯಲಾಟ ಸಮಿತಿಯ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್, ಗುತ್ತಿಗೆದಾರ ವಿಶ್ವನಾಥ ಶೆಟ್ಟಿ, ಶಾಲಾ ನಾಯಕ ದುರ್ಗಪ್ರಸಾದ್ ಶೆಟ್ಟಿಗಾರ್ ಮತ್ತಿತರಿರರು ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ ಪೂಜಾರಿ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಬಿ. ವಾರ್ಷಿಕ ವರದಿ ನೀಡಿದರು. ವಾಸಂತಿ ಬಹುಮಾನಿತರ ಪಟ್ಟಿ ವಾಚಿಸಿದರು. ಐರಿನ್ ಫೆರ್ನಾಂಡೀಸ್ ವಂದಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-15011801

Comments

comments

Comments are closed.

Read previous post:
ಜ.14ರಂದು ಐಕಳೋತ್ಸವ

ಕಿನ್ನಿಗೋಳಿ : ಐಕಳಬಾವ ಕಾಂತಾಬಾರೆ-ಬೂದಾಬಾರೆ ಜೋಡುಕರೆ ಕಂಬಳ ಸಮಿತಿಯ ನೇತೃತ್ವದಲ್ಲಿ ಐಕಳೋತ್ಸವದ ತುಳು ಜಾನಪದ ಕ್ರೀಡಾ ಮೇಳವು ಜ. 14 ರಂದು ಐಕಳದ ಕಾಂತಾಬಾರೆ-ಬೂದಾಬಾರೆ ಜೋಡುಕರೆ ಕಂಬಳದ ಮಂಜೊಟ್ಟಿ ಗದ್ದೆಯಲ್ಲಿ...

Close