ಇಂಟರ್‌ಲಾಕ್ ಕಾಮಗಾರಿ ಲೋಕರ್ಪಣೆ

ಕಿನ್ನಿಗೋಳಿ: ಗ್ರಾಮ ಹಾಗೂ ಶ್ರದ್ದಾ ಕೇಂದ್ರಗಳು ವಿಕಾಸ ಹೊಂದಿ ಪುನರತ್ಥಾನಗೊಳ್ಳಬೇಕು ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಕೊಳುವೈಲು ಕೋರ‍್ದಬ್ಬು ದೈವಸ್ಥಾನದ ಬಳಿ ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿಯ ಅನುದಾನದಲ್ಲಿ 1.77 ಲಕ್ಷ ರೂ. ವೆಚ್ಚ ಇಂಟರ್‌ಲಾಕ್ ಕಾಮಗಾರಿಯನ್ನು ಲೋಕರ್ಪಣೆಗೊಳಿಸಿ ಮಾತನಾಡಿದರು.
ಗ್ರಾಮದ ಹಿರಿಯರಾದ ಕೃಷ್ಣಪ್ಪ ಕೊಳುವೈಲು ಇಂಟರ್‌ಲಾಕ್ ಕಾಮಗಾರಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ಉದಾರವಾಗಿ ಸ್ಥಳದಾನ ನೀಡಿದ ಗಣೇಶ್ ಎ. ಕೋಟ್ಯಾನ್ ಅವರನ್ನು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಗೌರವಿಸಿದರು.
ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಬೇಬಿ ಸುಲೋಚನಾ, ಜಯಂತಿ, ಸುಗಂಧಿ, ವಿನೋದ್‌ಕುಮಾರ್, ಮಾಜಿ ತಾ.ಪಂ. ಸದಸ್ಯೆ ಸಾವಿತ್ರಿ, ದೇವದಾಸ್, ಭೋಜ ದೇವಾಡಿಗ, ಮಹಾಬಲ ಹಳೆಯಂಗಡಿ, ಕಮಲಾ, ಗೋವಿಂದ, ಪದ್ಮನಾಭ, ಪುಷ್ಪರಾಜ್ ದೇವಾಡಿಗ, ದಯಾಕ್ಷಿ, ಪ್ರಮೀಳಾ, ಗಂಗಾಧರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಹಳೆಯಂಗಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ನರೇಂದ್ರ ಪ್ರಭು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್ ಸಸಿಹಿತ್ಲು ವಂದಿಸಿದರು, ಮನೋಜ್‌ಕುಮಾರ್ ಇಂದಿರಾನಗರ ಕಾರ್ಯಕ್ರಮ ನಿರೂಪಿಸಿದರು.

Kinnigoli-15011804

 

Comments

comments

Comments are closed.

Read previous post:
Kinnigoli-15011803
ಕೆರೆಕಾಡು ಕಾಂಕ್ರೀಟಿಕರಣ ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ: ಕೆರೆಕಾಡು ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಎಸ್.ಟಿ ಕಾಲನಿ ರಸ್ತೆ ಗಣೇಶ್ ಕಾರ್ಣಿಕ್, ದ.ಕ. ಜಿಲ್ಲಾ ಪಂಚಾಯಿತಿ, ಮಂಗಳೂರು ತಾಲೂಕು ಪಂಚಾಯಿತಿ ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿ...

Close