ಮನೆಗಳಲ್ಲಿ ಭಗವದ್ಗೀತೆಯ ಪಠಣವಾಗಲಿ

ಕಿನ್ನಿಗೋಳಿ: ಮನೆಮನೆಗಳಲ್ಲಿ ಜಗತ್ತೇ ಗೌರವಿಸುವ ಭಗವದ್ಗೀತೆಯನ್ನು ದಿನಂಪ್ರತಿ ಹೇಳುವಂತಾಗಬೇಕು. ಭಗವದ್ಗೀತೆಯನ್ನು ಹೇಳಿದ ಕೃಷ್ಣ ಕೇಳಿದ ಅರ್ಜುನ ಬರೆದ ವೇದವ್ಯಾಸರು ಯಾರೂ ಬ್ರಾಹ್ಮಣರಲ್ಲ. ಎಲ್ಲರೂ ಕಲಿತು ಹೇಳಬೇಕಾದ ಹೇಳಬಹುದಾದ್ದು ಭಗವದ್ಗೀತೆಯಾಗಿದೆ. ಜೀವನಪಾಠ ಇದರಿಂದ ಅನುಭವವಾಗುತ್ತದೆ ಎಂದು ಕಟೀಲು ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಹಳೆವಿದ್ಯಾರ್ಥಿ ಸಂಘದ ಆಸರೆಯಲ್ಲಿ ಕಟೀಲು ದೇವಳದ ಎಲ್ಲ ಶಿಕ್ಞಣ ಸಂಸ್ಥೆಗಳ ಆಸಕ್ತ ವಿದ್ಯಾರ್ಥಿಗಳಿಗೆ ನಡೆಯಲಿರುವ ಭಗವದ್ಗೀತೆ ತರಗತಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಸದಾನಂದ ಆಸ್ರಣ್ಣ ತರಗತಿ ಉದ್ಘಾಟಿಸಿ ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಭಗವದ್ಗೀತೆ ಪಠಣ ಪೂರಕ ಎಂದರು.
ಕಟೀಲು ಪ್ರೌಡಶಾಲಾ ವೈಸ್ ಪ್ರಿನ್ಸಿಪಾಲ್ ಸೋಮಪ್ಪ ಅಲಂಗಾರು, ಶಿಕ್ಷಕಿ ಶೈಲಜಾ ದಿವಾಕರ್, ಶ್ರೀವತ್ಸ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್, ಕಾರ್ಯದರ್ಶಿ ಮಿಥುನ ಕೊಡೆತ್ತೂರು ಉಪಸ್ಥಿತರಿದ್ದರು.

Kinnigoli-16011802

Comments

comments

Comments are closed.

Read previous post:
Kinnigoli-16011801
ಸೇವಾ ಸಂಸ್ಥೆಗಳು ಗ್ರಾಮಕ್ಕೆ ಆಸರೆಯಾಗಬೇಕು

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಗ್ರಾಮದ ಏಳಿಗೆಗೆ ಆಸರೆಯಾಗಿ ಬೆಳೆದಾಗ ಸೇವಾ ಮನೋಭಾವನೆ ಸಾರ್ಥಕತೆ ಕಂಡುಕೊಳ್ಳುತ್ತದೆ. ಎಂದು ತೋಕೂರು ಯುವಕ ಸಂಘದ ಸ್ಥಾಪಕ ಸದಸ್ಯ ಎಲ್.ಕೆ. ಸಾಲ್ಯಾನ್ ಹೇಳಿದರು. ಪಡುಪಣಂಬೂರು...

Close