ಪರ್ಯಾಯೋತ್ಸವ : ಹೊರೆಕಾಣಿಕೆ

ಕಿನ್ನಿಗೋಳಿ: ಉಡುಪಿ ಪಲಿಮಾರು ಶ್ರೀ ವಿದ್ಯಾದೀಶ ತೀರ್ಥ ಶ್ರೀ ಪಾದಂಗಳರವರ ಶ್ರೀ ಕೃಷ್ಣ ಪೂಜಾ ಪರ್ಯಾಯೋತ್ಸವದ ಪ್ರಯುಕ್ತ ಅತ್ತೂರು ಕೊಡೆತ್ತೂರು ಮತ್ತು ಕಟೀಲು ಗ್ರಾಮಸ್ಥರ ಹೊರೆ ಕಾಣಿಕೆಯ ಮೆರವಣಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಸೋಮವಾರ ಉಡುಪಿ ಕೃಷ್ಣ ಮಠದ ತನಕ ನಡೆಯಿತು. ದ.ಕ. ಲೋಕಸಭಾ ಸದಸ್ಯ ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಮೆರವಣಗೆಗೆ ಚಾಲನೆ ನೀಡಿದರು. ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಶಂಭು ಮುಕಾಲ್ದಿ ಅತ್ತೂರು, ಜಯರಾಮ ಮುಕ್ಕಾಲ್ದಿ ಕೊಡೆತ್ತೂರು, ಏಳಿಂಜೆ ಕೊಂಜಾಲುಗುತ್ತು ಪ್ರಭಾಕರ ಶೆಟ್ಟಿ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು, ಗಂಗಾಧರ ಶೆಟ್ಟಿ ಮೂಡ್ರಗುತ್ತು, ನಂದಿನಿ ಬ್ರಾಹ್ಮಣ ಸಭಾದ ಡಾ| ಶಶಿ ಕುಮಾರ್, ವೇದವ್ಯಾಸ ಉಡುಪ ದೇವಸ್ಯ ಮಠ, ರಾಘವೇಂದ್ರ ಆಚಾರ್ಯ ಬಜಪೆ, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಈಶ್ವರ್ ಕಟೀಲು, ಗಿರೀಶ್ ಶೆಟ್ಟಿ ಕುಡ್ತಿಮಾರ್ ಗುತ್ತು, ಪಿ. ಸತೀಶ್ ರಾವ್, ರವಿ ಆಚಾರ್ಯ ಬಜಪೆ, ದೊಡ್ಡಯ್ಯ ಮೂಲ್ಯ, ಅಭಿಲಾಷ್ ಶೆಟ್ಟಿ ಕಟೀಲು, ಸತೀಶ್ ಶೆಟ್ಟಿ ಎಕ್ಕಾರು, ವೆಂಕಟೇಶ ಉಡುಪ, ಮಿಥುನ್ ಕೊಡೆತ್ತೂರು, ಗುರುರಾಜ ಮಲ್ಲಿಗೆಯಂಗಡಿ, ಪ್ರಥ್ವಿ ರಾಜ ಆಚಾರ್ಯ, ಲೋಕಯ್ಯ ಸಾಲ್ಯಾನ್ ಕಟೀಲು ಮತ್ತಿತರರು ಉಪಸ್ಥಿತರಿದ್ದರು.

Kinnigoli-16011807

Comments

comments

Comments are closed.

Read previous post:
Kinnigoli-16011806
ಸಂಸ್ಕೃತಿ ಸಂಸ್ಕಾರದ ಪ್ರತೀಕ ಧಾರ್ಮಿಕ ಕ್ಷೇತ್ರಗಳು

ಕಿನ್ನಿಗೋಳಿ: ತುಳುನಾಡಿನ ಸಂಸ್ಕೃತಿ ಸಂಸ್ಕಾರದ ಪ್ರತೀಕವಾಗಿದೆ ನಮ್ಮ ಧಾರ್ಮಿಕ ಪುಣ್ಯ ಕ್ಷೇತ್ರಗಳು. ಧಾರ್ಮಿಕ ಸಾಮಾಜಿಕ ಕಾರ್ಯಗಳೊಂದಿಗೆ ದೇವರ ದೈವದ ಕೆಲಸ ಮಾಡುವ ಮದ್ಯಸ್ಥರನ್ನು ಗೌರವಿಸುವುದು ಶ್ಲಾಘನೀಯ ಎಂದು ಮುಂಬಯಿ...

Close