ಕಿನ್ನಿಗೋಳಿ: ಮಕರ ಸಂಕ್ರಾತಿ ತಾಳಮದ್ದಲೆ

ಕಿನ್ನಿಗೋಳಿ: ಯಕ್ಷಗಾನ ತಾಳಮದ್ದಳೆಯಿಂದ ಧಾರ್ಮಿಕ ಪ್ರಜ್ಞೆ ಹಾಗೂ ಧರ್ಮ ಜಾಗೃತಿ ಪಸರಿಸಿದಾಗ ಸುಸಂಸ್ಕೃತ ಸದೃಡ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ಣಾಟಕ ಬ್ಯಾಂಕ್ ಮಹಾ ಪ್ರಬಂಧಕ ಚಂದ್ರಶೇಖರ ರಾವ್ ಬಿ. ಹೇಳಿದರು.
ಕಿನ್ನಿಗೋಳಿ ಯಕ್ಷಲಹರಿ (ರಿ) ಯುಗಪುರುಷ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಕರ ಸಂಕ್ರಾತಿ ಪ್ರಯುಕ್ತ ಭಾನುವಾರ ನಡೆದ ತಾಳಮದ್ದಲೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿನಿಮಾವನ್ನು ಎರಡು ಅಥವ ಮೂರು ಬಾರಿ ನೋಡಬಹುದು ಆದರೇ ದೇವಿಮಹಾತ್ಮ್ಯೆ ಎಷ್ಟೂ ನೋಡಿದರೂ ನೀರಸವಾಗುವುದಿಲ್ಲ ಯಕ್ಷಗಾನದಲ್ಲಿ ಪ್ರತಿ ದಿನ ಹೊಸತನವಿದೆ, ಯಕ್ಷಗಾನದ ಪರಂಪರೆಯ ಮೂಲ ಆಶಯಕ್ಕೆ ದಕ್ಕೆ ಬರದ ರೀತಿಯಲ್ಲಿ ಬದಲಾವಣೆ ಆಗಬೇಕು ಎಂದು ಹೇಳಿದರು.
ಈ ಸಂದರ್ಭ ಯಕ್ಷಗಾನ ಸಂಘಟಕ ಗಿರೀಶ್ ನಾವಡ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು. ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಶ್ರೀ ವತ್ಸ, ಉಮೇಶ್ ನೀಲಾವರ ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ ಸನ್ಮಾನಿತರ ಅಭಿನಂದನಾ ಭಾಷಣಗೈದರು. ಜೊತೆ ಕಾರ್ಯದರ್ಶಿ ರಘುನಾಥ ಕೆಂಚನಕೆರೆ ವಂದಿಸಿದರು. ಕಾರ್ಯದರ್ಶಿ ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ಕರ್ಣ ಪರ್ವ ಹಾಗೂ ಬಳಿಕ ಸುದನ್ವಾರ್ಜುನ ಯಕ್ಷಗಾನ ತಾಳಮದ್ದಲೆ ನಡೆಯಿತು.

Kinnigoli-16011803

Comments

comments

Comments are closed.

Read previous post:
Kinnigoli-16011802
ಮನೆಗಳಲ್ಲಿ ಭಗವದ್ಗೀತೆಯ ಪಠಣವಾಗಲಿ

ಕಿನ್ನಿಗೋಳಿ: ಮನೆಮನೆಗಳಲ್ಲಿ ಜಗತ್ತೇ ಗೌರವಿಸುವ ಭಗವದ್ಗೀತೆಯನ್ನು ದಿನಂಪ್ರತಿ ಹೇಳುವಂತಾಗಬೇಕು. ಭಗವದ್ಗೀತೆಯನ್ನು ಹೇಳಿದ ಕೃಷ್ಣ ಕೇಳಿದ ಅರ್ಜುನ ಬರೆದ ವೇದವ್ಯಾಸರು ಯಾರೂ ಬ್ರಾಹ್ಮಣರಲ್ಲ. ಎಲ್ಲರೂ ಕಲಿತು ಹೇಳಬೇಕಾದ ಹೇಳಬಹುದಾದ್ದು ಭಗವದ್ಗೀತೆಯಾಗಿದೆ....

Close