ಸೇವಾ ಸಂಸ್ಥೆಗಳು ಗ್ರಾಮಕ್ಕೆ ಆಸರೆಯಾಗಬೇಕು

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಗ್ರಾಮದ ಏಳಿಗೆಗೆ ಆಸರೆಯಾಗಿ ಬೆಳೆದಾಗ ಸೇವಾ ಮನೋಭಾವನೆ ಸಾರ್ಥಕತೆ ಕಂಡುಕೊಳ್ಳುತ್ತದೆ. ಎಂದು ತೋಕೂರು ಯುವಕ ಸಂಘದ ಸ್ಥಾಪಕ ಸದಸ್ಯ ಎಲ್.ಕೆ. ಸಾಲ್ಯಾನ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರು ವಿನಲ್ಲಿ ನಿರ್ಮಾಣಗೊಂಡ ನೂತನ ಕಿಂಡಿಅಣೆಕಟ್ಟನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.
ಸುವರ್ಣ ಮಹೋತ್ಸವದ ವರ್ಷಾಚರಣೆಯಲ್ಲಿರುವ ತೋಕೂರು ಯುವಕ ಸಂಘದ ಸಾಮಾಜಿಕ ಚಟುವಟಿಕೆಯ ಯೋಜನೆಯಲ್ಲಿ ವಿಶ್ವಬ್ಯಾಂಕ್ ನೆರವಿನ ಸಮಗ್ರ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆಯ ಕ್ಲಸ್ಟರ್ 1 ರ ತೋಕೂರು ಸಮಿತಿಯ ನೇತೃತ್ವದಲ್ಲಿ ಗ್ರಾಮಸ್ಥರ ಹಾಗೂ ಗ್ರಾಮ ಪಂಚಾಯತ್‌ನ ಸಹಕಾರದಲ್ಲಿ 2.5 ಲಕ್ಷ ರೂ. ವೆಚ್ಚದಲ್ಲಿ ಕಿಂಡಿಅಣೆಕಟ್ಟು ನಿರ್ಮಿಸಲಾಗಿದೆ.
ಪಡುಪಣಂಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಹೇಮಂತ್ ಅಮೀನ್, ಸಂತೋಷ್‌ಕುಮಾರ್, ಲೀಲಾ ಬಂಜನ್, ದಿನೇಶ್ ಕುಲಾಲ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ.ಕೋಟ್ಯಾನ್, ತೋಕೂರು ಮಹಿಳಾ ಮಂಡಳಿ ಅಧ್ಯಕ್ಷೆ ವಿನೋದಾ ಭಟ್, ವಿಶ್ವಬ್ಯಾಂಕ್ ಸಮಿತಿಯ ಅಧ್ಯಕ್ಷ ವಿನೋದ್‌ಕುಮಾರ್, ಕೋಶಾಽಕಾರಿ ಟಿ.ಜಿ.ಭಂಡಾರಿ, ಸಹ ಕಾರ್ಯದರ್ಶಿ ರಮೇಶ್ ದೇವಾಡಿಗ, ಸಮಿತಿಯ ಬಶೀರ್ ಕಲ್ಲಾಪು, ವಿಜಯಕುಮಾರ್ ರೈ, ದಾಮೋದರ ಶೆಟ್ಟಿ, ವಿಪುಲ್ಲ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿ, ಶೇಖರ್ ಶೆಟ್ಟಿಗಾರ್, ಗೋಪಾಲ ಮೂಲ್ಯ, ಪದ್ಮನಾಭ ಸಾಲ್ಯಾನ್, ಶಂಕರ್ ಪೂಜಾರಿ, ದುರ್ಗಾಪ್ರಸಾದ್ ಶೆಟ್ಟಿ, ಪರಮೇಶ್ವರ ಶೆಟ್ಟಿಗಾರ್, ಮಧುಸೂಧನ್, ಯಶೋಧ ಪಿ. ರಾವ್, ಪುಷ್ಪಾ ಕೆ., ಸಂಶುದ್ಧೀನ್, ಸಲಾವುದ್ಧೀನ್, ಪ್ರಿಯದರ್ಶಿನಿ, ಅಭಿಜಿತ್ ಮತ್ತಿತರರು ಉಪಸ್ಥಿತರಿದ್ದರು.
ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-16011801

Comments

comments

Comments are closed.

Read previous post:
Kinnigoli-15011804
ಇಂಟರ್‌ಲಾಕ್ ಕಾಮಗಾರಿ ಲೋಕರ್ಪಣೆ

ಕಿನ್ನಿಗೋಳಿ: ಗ್ರಾಮ ಹಾಗೂ ಶ್ರದ್ದಾ ಕೇಂದ್ರಗಳು ವಿಕಾಸ ಹೊಂದಿ ಪುನರತ್ಥಾನಗೊಳ್ಳಬೇಕು ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಹೇಳಿದರು. ಹಳೆಯಂಗಡಿ ಗ್ರಾಮ ಪಂಚಾಯಿತಿ ಕೊಳುವೈಲು...

Close